- Advertisement -
- Advertisement -
- Advertisement -
- Advertisement -
Sidlaghatta : ಶಿಡ್ಲಘಟ್ಟ ನಗರದ ಒಂದನೇ ನಗರ್ತಪೇಟೆಯ ಮಾಡ್ರನ್ ಶಾಲೆಯ ಬಳಿ ಹಲವು ವರ್ಷಗಳ ಪುರಾತನ ದೇವಾಲಯ ಆದಿ ಶಕ್ತಿ ಶ್ರೀ ಮಹೇಶ್ವರಮ್ಮ ದೇವಿಯ ದೇವಾಲಯ ಶಿಥಲವಾಗಿದ್ದ ಕಾರಣ, ದೇವಿಯ ನೂತನ ವಿಗ್ರಹ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಯಿತು.
ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಿಗೆ ಗಂಗೆ ಪೂಜೆ, ಸ್ವಸ್ತಿವಚನ, ದೇವನಾಂದಿ, ಪಂಚಗವ್ಯ, ಮಂಟಪ ಪೂಜೆ, ಕುಂಡ ಸಂಸ್ಕಾರ, ಪ್ರಧಾನ ಹೋಮ ಸೇರಿದಂತೆ ಮದ್ಯಾಹ್ನ ಮಹಾ ಮಂಗಳರಾತಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಂ. ಮಂಜುನಾಥ್, ಮಾಜಿ ನಗರ ಸಭಾ ಸದಸ್ಯ ಬಾಲಕೃಷ್ಣ, ಶಿವಕುಮಾರ್, ರಾಜು, ಸುಬ್ರಮಣಿ ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರು.
For Daily Updates WhatsApp ‘HI’ to 7406303366
- Advertisement -