Srinivasapura : ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ಆಶ್ರಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕಿನ ಎಲ್ಲಾ ಸಹಕಾರ ಸಂಘಗಳ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ (71st all India cooperative week) ಚಾಲನೆ ನೀಡಲಾಯಿತು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಪಲ್ಲಿ ಪಿ.ಎಂ. ವೆಂಕಟೇಶ್ ಅವರು ಮಾತನಾಡಿ, “ಸಹಕಾರ ಸಂಘಗಳನ್ನು ಬಲಿಷ್ಠ ಮಾಡಲು ಹೆಚ್ಚು ಹೆಚ್ಚು ಷೇರುದಾರರನ್ನು ಸೇರಿಸಬೇಕು. ದೇಶದಲ್ಲಿ ಸುಮಾರು 8.5 ಲಕ್ಷ ಸಹಕಾರ ಸಂಘಗಳಿರುವುದರಿಂದ, ಗ್ರಾಮ ಪಂಚಾಯಿತಿಗಳಲ್ಲಿ ಸಹಕಾರ ಸಂಘಗಳನ್ನು ನವೀಕರಿಸಿ ಅಭಿವೃದ್ಧಿ ಮಾಡಿದರೆ, ಜನರಿಗೆ ಹೆಚ್ಚಿನ ಅನುಕೂಲವಾಗಬಹುದು. ಸಹಕಾರ ಸಂಘಗಳು ನಬಾರ್ಡ್ ಬ್ಯಾಂಕಿನಿಂದ ಆರ್ಥಿಕ ಸಾಲ ಪಡೆಯಬಹುದು. ಈ ರೀತಿ ಸಣ್ಣ ವ್ಯವಹಾರಗಳು ಸಹಕಾರ ಸಂಘಗಳ ಆರ್ಥಿಕ ಸ್ಥಿತಿಯನ್ನು ಶಕ್ತಿಮತ್ತೆಯಾಗಿ ಮಾಡಬಹುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾವು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ, ಜಿಲ್ಲಾಸಹಕಾರ ಸಂಘದ ಉಪಾಧ್ಯಕ್ಷ ಕಲ್ಪಮಂಜಲಿ ಟಿ.ಕೆ. ಬೈರೇಗೌಡ, ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ. ಲಕ್ಷ್ಮಣರೆಡ್ಡಿ, ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಮಾಜಿ ನಿರ್ದೇಶಕ ಬೈರಾರೆಡ್ಡಿ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಶ್ರೀನಿವಾಸಪುರ ಶಾಖೆಯ ಉಪ ವ್ಯವಸ್ಥಾಪಕ ಡಾ. ಕೆ.ಎಂ. ಮುನಿರಾಜು ಹಾಗೂ ಸಹಕಾರ ಸಂಘದ ನಿರ್ದೇಶಕರು ಮೂರಾಂಡಹಳ್ಳಿ ಮತಿತ್ತರರು ಭಾಗವಹಿಸಿದರು.