ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಅಗತ್ಯವಾಗಿದೆ : ಶಾಸಕ

- Advertisement -
- Advertisement -

Srinivasapura : ಶ್ರೀನಿವಾಸಪುರ ತಾಲ್ಲೂಕು JDS ಕಚೇರಿಯಲ್ಲಿ ಬುಧವಾರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಹಾಗೂ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸುದ್ದಿಗೋಷ್ಠಿ (Press Meet) ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ” ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ರಾಷ್ಟ್ರಕ್ಕೆ ಮೋದಿ ನಾಯಕತ್ವ ಹೇಗೋ ಹಾಗೆಯೇ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಅಗತ್ಯವಾಗಿದೆ. ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಮುದಿಮಡಗು ಪಂಚಾಯಿತಿಯ ಮಗಳು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ. ಅವರ ಪುತ್ರನಾಗಿರುವ ಮಲ್ಲೇಶ್ ಬಾಬು ಅವರ ತಂದೆ ದಿವಂಗತ ಮುನಿಸ್ವಾಮಿ ಐಎಎಸ್‌ ಅಧಿಕಾರಿಯಾಗಿ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಿದ್ದರು. ಇಂತಹ ವಿದ್ಯಾವಂತ ಕುಟುಂಬದಿಂದ ಬಂದಿರುವ ವ್ಯಕ್ತಿಯಾಗಿರುವ ಮಲ್ಲೇಶ್ ಆಯ್ಕೆ ಸೂಕ್ತವಾಗಿದೆ” ಎಂದರು.

ಸುದ್ಧಿಗೋಷ್ಠಿಯಲ್ಲಿ ಜಿ. ಪಂ. ಮಾಜಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ, ಜಿ.ರಾಜಣ್ಣ, ಡಾ.ವೇಣುಗೋಪಾಲ್, ಚಿರುವನಹಳ್ಳಿ ಲಕ್ಷ್ಮಣಗೌಡ, ರೋಣೂರು ಚಂದ್ರು, ನಲ್ಲಪಲ್ಲಿರೆಡ್ಡಪ್ಪ, ಗಾಯತ್ರಿ ಮುತ್ತಪ್ಪ, ಗೌನಪಲ್ಲಿ ಪಂಚಾಯಿತಿ ಸದಸ್ಯ ಅಮ್ಜದ್ ಖಾನ್, ಪೂಲು ಶಿವಾರೆಡ್ಡಿ, ಗಣೇಶ್, ಲಕ್ಷ್ಮಿಪುರ ಶೇಕ್ ಇಸ್ಮಾಯಿಲ್, ತೂಪಲ್ಲಿ ಮಧುಸೂಧನರೆಡ್ಡಿ, ಕೊಂಡಸಂದ್ರ ನಾಗರಾಜ್, ಬಾರ್ ನಾರಯಣಸ್ವಾಮಿ, ಕೊಂಡಸಂದ್ರ ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!