Chikkaballapur : ಶ್ರದ್ಧಾಭಕ್ತಿಯೊಂದಿಗೆ ಷಷ್ಠಿ ಹಬ್ಬವನ್ನು ಗುರುವಾರ ಚಿಕ್ಕಬಳ್ಳಾಪುರ ನಗರದ ಸುಬ್ಬರಾಯನಪೇಟೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರು ಆಚರಿಸಿದರು. ಬೆಳಗಿನ ಜಾವ 3 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗಿ ಸಂಜೆ 7 ಗಂಟೆ ವರೆಗೆ ನಡೆದವು.
ದೇಗುಲದಲ್ಲಿರುವ ಬಾಲಸುಬ್ರಹ್ಮಣ್ಯ, ಲಕ್ಷ್ಮಿ ನರಸಿಂಹ, ಈಶ್ವರ ಮತ್ತು ಪಾರ್ವತಿ ದೇವಿ ಮೂರ್ತಿಗಳಿಗೆ ಅರ್ಚಕರು ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅರ್ಚನೆ, ಅಲಂಕಾರ, ಮಂಗಳಾರತಿ ಸೇವೆ ಸಲ್ಲಿಸಿದರು. ದೇವಾಲಯದ ಆವರಣದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.
ಬೆಳಿಗ್ಗೆಯಿಂದಲೇ ದೇವಾಲಯತ್ತ ಮುಖ ಮಾಡಿದ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೇವಸ್ಥಾನದ ಆವರಣದಲ್ಲಿರುವ ನಾಗರಕಲ್ಲುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸಿ ಹಾಲು, ಮೊಸರು, ತುಪ್ಪದಿಂದ ತನಿ ಎರಚಿ ಭಕ್ತಿ ಸಮರ್ಪಿಸಿದರು.