Gauribidanur : ಗೌರಿಬಿದನೂರು ತಾಲ್ಲೂಕಿನ ತರಿದಾಳು (Taridalu)ಗ್ರಾಮದಲ್ಲಿ ಮಂಗಳವಾರ DCC Bank ಹಾಗೂ ಸ್ಥಳೀಯ VSSN ವತಿಯಿಂದ ATM Card ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (N. H. Shivashankar Reddy) “ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ (Kolar Chikkaballapur DCC Bank) ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಾಲವನ್ನು ನೀಡುತ್ತಿದ್ದು, ಮಹಿಳೆಯರು ಅದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಆರ್ಥಿಕವಾಗಿ ಸಬಲರಾಗುವುದಲದೇ ಸಕಾಲದಲ್ಲಿ ಮರುಪಾವತಿ ಮಾಡಬೇಕು ” ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ಸ್ಥಳೀಯ ವಿಎಸ್ಸೆಸ್ಸೆಎನ್ ಅಧ್ಯಕ್ಷ ಟಿ.ಎಂ.ಚಿಕ್ಕಣ್ಣ, ಮುಖಂಡ ಎನ್.ಎಚ್. ಲಕ್ಷ್ಮಿನಾರಾಯಣಪ್ಪ, ಗಂಗಾಧರಯ್ಯ, ಸೋಮರೆಡ್ಡಿ, ಕೃಷ್ಣರಾವ್, ಸುಬ್ಬರಾವ್, ಸುವರ್ಣಮ್ಮ, ಮೈಲಕ್ಕ, ಮುತ್ತಕ್ಕ, ಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.