Chintamani : ಚಿಂತಾಮಣಿ ನಗರದ ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಅಖಿಲ ಕರ್ನಾಟಕ ಅರ್ಚಕ-ಪುರೋಹಿತರ ಸಂಘ ಹಾಗೂ ಮುಜರಾಯಿ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತಿರುಪತಿ ದೇವಾಲಯದ ಲಾಡಿಗೆ (Tirupati Laddu) ಕಲಬೆರಕೆ ಮಾಡಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ (Protest) ನಡೆಸಲಾಯಿತು. ಪ್ರತಿಭಟನಾಕಾರರಿಂದ ಶಿರಸ್ತೆದಾರ್ ರವೀಶ್ ಮನವಿ ಸ್ವೀಕರಿಸಿದರು
ಈ ಸಂಧರ್ಬಹದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮಾಶಂಕರ ಶರ್ಮ “ಪ್ರಸಾದದ ಕಲಬೆರಕೆಯ ಕುರಿತು ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಶತಮಾನಗಳಿಂದ ತಿರುಪತಿಯ ಭಕ್ತರು ಲಾಡು ಪ್ರಸಾದಕ್ಕೆ ವಿಶೇಷ ಗೌರವ, ಮನ್ನಣೆ, ನಂಬಿಕೆ ಇಟ್ಟಿದ್ದಾರೆ. ಪ್ರಸಾದದಲ್ಲಿ ಕಲಬೆರಕೆ ಮಾಡಿರುವುದರಿಂದ ಭಕ್ತರು ಮನನೊಂದಿದ್ದಾರೆ. ಭಕ್ತರ ಭಾವನೆಗಳಿಗೆ ಘಾಸಿಯಾಗಿದೆ. . ಈ ಶಿಕ್ಷೆ ಮುಂದಿನವರಿಗೆ ಎಚ್ಚರಿಕೆಯ ಗಂಟೆಯಾಗಬೇಕು” ಎಂದು ತಿಳಿಸಿದರು.
ಕನ್ನಡ ಸಂಘದ ಕುಂಟಿಗಡ್ಡೆ ಲಕ್ಷ್ಮಣ್, ನಗರಸಭೆಯ ಮಾಜಿ ಸದಸ್ಯ ಟಿ.ಎಸ್.ನಾಗರಾಜ್, ಲಕ್ಷ್ಮಿನಾರಾಯಣಾಚಾರ್, ಅನಂತಪದ್ಮನಾಬ್, ಕೋಟಗಲ್ ಮಂಜುನಾಥ್, ಸುಬ್ಬಕೃಷ್ಣಸ್ವಾಮಿ, ಸುರೇಶ್, ಸುರೇಶಕುಮಾರ್, ಶ್ರೀನಿವಾಸಾಚಾರ್, ಮುರಳೀಧರ್, ನರಸಿಂಹಮೂರ್ತಿ ಭಾಗವಹಿಸಿದ್ದರು.