Chikkaballapur : ಚಿಕ್ಕಬಳ್ಳಾಪುರ ನಗರದ ವಿದ್ಯಾ ಕಲಾಭಿವೃದ್ಧಿ ಸಂಸ್ಥೆ ವತಿಯಿಂದ ಮಂಗಳವಾರ ತ್ಯಾಗರಾಜ ಸ್ವಾಮಿ ಆರಾಧನಾ (Tyagaraja Swami Aradhana) ಮಹೋತ್ಸವ ಆಯೋಜಿಸಲಾಯಿತು.
ಬೆಳಿಗ್ಗೆ, ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಅಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ, ಸಂಸ್ಥೆ ಆವರಣದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಸ್ಥಳೀಯ ಕಲಾವಿದರಿಂದ ನಾದಸ್ವರ ಮತ್ತು ಡೋಲು ಕಛೇರಿ ಮತ್ತು ಸಂಜೆ, ತಮಿಳುನಾಡಿನ ಕಲಾವಿದರ ತಂಡದಿಂದ ಸಂಗೀತ ಕಛೇರಿ ಕಲಾತ್ಮಕವಾಗಿ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಜಿ. ಹರೀಶ್, ಕಾರ್ಯದರ್ಶಿ ಬಿ. ವೆಂಕಟೇಶ್, ಖಜಾಂಚಿ ಆರ್. ಮೋಹನ್, ನಾರಾಯಣಸ್ವಾಮಿ ಮತ್ತು ಮತ್ತಿತರರು ಪಾಲ್ಗೊಂಡಿದ್ದರು.