Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದಲ್ಲಿ ಮಂಗಳವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ (Vikasith Bharath Sankalp Yatra) ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರದ (Ayodhya Ram Mandir) ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್ “500 ವರ್ಷಗಳ ಕನಸು ನನಸಾಗಿ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಿದೆ. ಕಾಂಗ್ರೆಸ್‌ಗೆ ರಾಮ ಬೇಕಿಲ್ಲ. ರಾಮ ಇದ್ದಾನಾ, ಎಲ್ಲಿದ್ದಾನೆ ಎಂದು ಕಾಂಗ್ರೆಸ್‌ನವರು ಕೇಳಿದ್ದರು. ನ್ಯಾಯಾಲಯದಲ್ಲಿ ರಾಮಸೇತು ಸತ್ಯ ಅಲ್ಲ ಎಂದು ವಾದಿಸಿದ್ದರು. ಮಂತ್ರಾಕ್ಷತೆ ಅನ್ನಭಾಗ್ಯದ ಅಕ್ಕಿ ಎಂದು ಕಾಂಗ್ರೆಸಿಗರು ಹೇಳುತ್ತಾರೆ. ಆದರೆ ಆ ಅನ್ನಭಾಗ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದಾರೆ. ಗ್ಯಾರಂಟಿ ಎಂದು ಹೇಳಿದವರು ಬರಗಾಲವನ್ನು ಮಾತ್ರ ಗ್ಯಾರಂಟಿಯಾಗಿ ನೀಡಿದ್ದಾರೆ. ರೈತರಿಗೆ ವಿದ್ಯುತ್, ನೀರಿಲ್ಲ, ನಾವು ನೀಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿ ಸಿಗುತ್ತಿಲ್ಲ. ಕಾಂಗ್ರೆಸ್‌ನಿಂದ ಬರಗಾಲ ಹಾಗೂ ಆತ್ಮಹತ್ಯೆ ಗ್ಯಾರಂಟಿ ಉಚಿತವಾಗಿ ಸಿಕ್ಕಿದೆ” ಎಂದು ತಿಳಿಸಿದರು.
ಕೆ.ವಿ.ನಾಗರಾಜ್, ಚಿನ್ನಪ್ಪರೆಡ್ಡಿ, ಚನ್ನಕೇಶವ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.