Chikkaballapur : ಮಂಗಳವಾರ ಬಿಆರ್‌ಸಿ ಕೇಂದ್ರದಲ್ಲಿ 2021-22ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ (National Voters Day)ಯ ಅಂಗವಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಭಿತ್ತಿ ಚಿತ್ರ ಪ್ರದರ್ಶನ ನಡೆಯಿತು.
ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಕ್ಕೆ ಪ್ರತ್ಯೇಕ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ ಆಯೋಜಿಸಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಡೆಸುವ ಚುನಾವಣೆಗಳಿಗೆ ಪಾಲಿಸುವ ಸುರಕ್ಷತಾ ಕ್ರಮ’ ಅಥವಾ ‘ಮತದಾನ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳು’ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ‘ಮಾದರಿ ಮತದಾನ ಕೇಂದ್ರ’ ಅಥವಾ ‘ಪರಿಣಾಮಕಾರಿ ಚುನಾವಣೆ ನಡೆಸಲು ಯುವಕರ ಪಾತ್ರ’ ಚಿತ್ರಕಲಾ ಸ್ಪರ್ಧೆಯ ವಿಷಯವಾಗಿತ್ತು.
ಜಿಲ್ಲೆಯಲ್ಲಿನ ಒಟ್ಟು 6 ತಾಲ್ಲೂಕಿನಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರೌಢಶಾಲೆಯ ವಿಭಾಗಕ್ಕೆ 3 ಮತ್ತು ಕಾಲೇಜು ವಿಭಾಗಕ್ಕೆ 3ರಂತೆ ಒಟ್ಟು 6 ಪ್ರಶಸ್ತಿ ಕೊಡಲಾಯಿತು.
ತೀರ್ಪುಗಾರರಾಗಿ ಚಿತ್ರಕಲಾ ಶಿಕ್ಷಕ ಎನ್ ಆರ್.ಸಂತೋಷ್ ಕುಮಾರ್, ಸಿ.ಎಲ್.ಸತೀಶ್, ನಂದೀಶ್ ಪಾಲ್ಗೊಂಡಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur