25.4 C
Bengaluru
Saturday, December 7, 2024

WAQF ಗೆ 21 ಸಾವಿರ ಎಕರೆ ಭೂಮಿ

- Advertisement -
- Advertisement -

Kolar : ಕೋಲಾರ ನಗರ ಹೊರವಲಯದಲ್ಲಿರುವ BJP ಕಚೇರಿಯಲ್ಲಿ ಬುಧವಾರ ಮಾಜಿ ಸಂಸದ ಮುನಿಸ್ವಾಮಿ (S Muniswamy) ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ (Press meet) ಆಯೋಜಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುನಿಸ್ವಾಮಿ, “ರಾಜ್ಯದ ಕಾಂಗ್ರೆಸ್ ಸರ್ಕಾರ ದೇವಸ್ಥಾನ, ಶಾಲೆ, ಮಠ, ಸ್ಮಶಾನ ಮತ್ತು ರೈತರ ಆಸ್ತಿಗಳನ್ನು ಕಬಳಿಸಿ ಅವನ್ನು ವಕ್ಫ್‌ಗೆ ವರ್ಗಾಯಿಸುತ್ತಿವ ಕ್ರಮವನ್ನು ನಾವು ಖಂಡಿಸುತ್ತೇವೆ. WAQF ಸಚಿವ ಜಮೀರ್ ಅಹಮದ್ ಖಾನ್ (B Z Zameer Ahmed Khan) ರಾಜ್ಯಾದ್ಯಾಂತ 21 ಸಾವಿರ ಎಕರೆ ಭೂಮಿಯನ್ನು ವಕ್ಫ್‌ಗೆ ನೀಡುತ್ತಿದ್ದಾರೆ. ಇದಕ್ಕೆ ವಿರೋಧವಾಗಿ, ನ.22ರಂದು, ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ಧರಣಿ ನಡೆಸಲಾಗುತ್ತದೆ. ವಕ್ಫ್‌ನಿಂದ ತೊಂದರೆ ಅನುಭವಿಸಿದವರು ಎಲ್ಲಾ ದಾಖಲೆಗಳನ್ನು ಸಮೇತ ಹೋರಾಟದಲ್ಲಿ ಭಾಗವಹಿಸಬೇಕು. ನಾವು ಈ ವಿಷಯವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸೋಣ. ಬಿಜೆಪಿ ಈಗಾಗಲೇ ವಿಜಯೇಂದ್ರ, ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಿದ್ದು, ನ.27, 28, 29ರಂದು ರಾಜ್ಯದಾದ್ಯಂತ ಓಡಾಡಿ‌ ವಕ್ಫ್‌ಗೆ ನೀಡಿದ ಜಮೀನನ್ನು ಬಹಿರಂಗಪಡಿಸಿ, ನ್ಯಾಯ ದೊರಕಿಸಿಕೊಡಲಾಗುವುದು ಮತ್ತು ಸಂಸತ್‌ನ ಚಳಿಗಾಲದ ಅಧಿವೇಶನ ದಲ್ಲಿ ಕೇಂದ್ರ ಸರ್ಕಾರ ವಕ್ಫ್‌ಗೆ ತಿದ್ದುಪಡಿ ತರುತ್ತಿರುವುದು ಗೊತ್ತಾದ ಮೇಲೆ ಇಷ್ಟೆಲ್ಲಾ ಅವಾಂತರ ನಡೆದಿದೆ” ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳು ಓಂಶಕ್ತಿ ಚಲಪತಿ, ಬಿ.ವಿ. ಮಹೇಶ್, ಹಾಗೂ ಮುಕ್ತಂಡರು ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಅರುಣಮ್ಮ, ಸಾಮಾ ಬಾಬು, ಮಂಜುನಾಥ್, ಶ್ರೀನಿವಾಸ್ ಅವರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!