Home Sidlaghatta ಕಾಲಜ್ಞಾನಿ ಯೋಗಿನಾರೇಯಣ ಕೈವಾರ ತಾತಯ್ಯನವರ 297 ನೇ ಜಯಂತ್ಯುತ್ಸವ

ಕಾಲಜ್ಞಾನಿ ಯೋಗಿನಾರೇಯಣ ಕೈವಾರ ತಾತಯ್ಯನವರ 297 ನೇ ಜಯಂತ್ಯುತ್ಸವ

0

Sidlaghatta : ಕೈವಾರ ಯೋಗಿನಾರಾಯಣ ಯತೀಂದ್ರರ ತತ್ವ, ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು. ಯೋಗಿ ನಾರೇಯಣ ಯತೀಂದ್ರರನ್ನು ಯಾವುದೇ ಒಂದು ಸಮಾಜಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲರೂ ಸೇರಿ ಮಹಾತ್ಮರ ಜಯಂತಿಗಳನ್ನು ಆಚರಿಸುವಂತಾಗಬೇಕು. ಕೈವಾರ ಯೋಗಿ ನಾರೇಯಣ ಯತೀಂದ್ರರು ನಮ್ಮದೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವುದು ನಮ್ಮೆಲ್ಲರ ಪೂರ್ವ ಪುಣ್ಯ ಎಂದು ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ ನಾಯ್ಡು ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾಲಜ್ಞಾನಿ ಸದ್ಗುರು ಯೋಗಿನಾರೇಯಣ ಕೈವಾರ ತಾತಯ್ಯನವರ 297 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ನೆರೆಯ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಹುಟ್ಟಿ ಬೆಳೆದ ಕೈವಾರ ತಾತಯ್ಯನವರು ತಮ್ಮ ಕುಲ ಕಸುವಾದ ಬಳೆ ವ್ಯಾಪಾರ ಮಾಡುತ್ತಲೇ ಕಾಲಜ್ಞಾನ ಬರೆದಂತಹ ಮಹತ್ಮರು ಎಂದರು.

 ಡಾ.ಡಿ.ಟಿ.ಸತ್ಯನಾರಾಯಣರಾವ್ ಮಾತನಾಡಿ, ಕಾಲಜ್ಞಾನ ಎಂದರೆ ಯೋಗ ಸಿದ್ಧಿ ಪಡೆದ ತಪಸ್ವಿಯ ಮುಖದಿಂದ ವಿಶ್ವಕಲ್ಯಾಣಕ್ಕಾಗಿ ಹೊರಬೀಳುವ ದೈವವಾಣಿ. ಭವಿಷ್ಯದಲ್ಲಿಘಟಿಸಲಿರುವ ವಿಶ್ವದ ಸ್ಥಿತಿಗತಿಗಳು ವಾಕ್ಸಿದ್ಧಿಯುಳ್ಳ ಮಹಾಪುರುಷರ ವಾಣಿಯ ಮೂಲಕ ಕಥನಗಳಾಗಿ ಹೊರಬೀಳುತ್ತವೆ. ಅದು ವಿಪತ್ತಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸೂಚನೆ ನೀಡುತ್ತದೆ. ಇದನ್ನು ರಚಿಸಿರುವ ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯ ಅವರು  ಸಿದ್ಧಿ ಪಡೆದ ಸಾಧಕ ಯೋಗಿ. ಮಾತ್ರವಲ್ಲ ಸಮಾಜ ಸುಧಾರಕರೂ ಹೌದು ಎಂದರು.

 ಸದ್ಗುರು ಶ್ರೀ ಯೋಗಿನಾರೇಯಣ ತಾತನವರ ಆರಾಧಕರ ಸಮಿತಿ ಅಧ್ಯಕ್ಷ ಬಿ.ಕೆ.ವೇಣು ಮಾತನಾಡಿ, ಮಾನವರಾಗಿ ಹುಟ್ಟಿದ ಮೇಲೆ ತಮ್ಮ ಆತ್ಮಶೋಧನೆ ಮಾಡಿಕೊಂಡು ಯೋಗ್ಯವಾದ ಗುರು ಆಶ್ರಯಿಸಬೇಕು. ನಿರಂತರವಾದ ಗುರು ಸ್ಮರಣೆಯಿಂದ ನಮ್ಮೊಳಗೆ ಚಿಂತನೆ ಆರಂಭವಾಗಿ ಎಲ್ಲಾ ರೀತಿಯ ಕರ್ಮ ನಾಶವಾಗುತ್ತದೆ. ಅಹಂಕಾರ ಮಾನವನಿಗೆ ದೊಡ್ಡ ಶತ್ರುವಾಗಿದ್ದು ಅದನ್ನು ಕಳೆದುಕೊಳ್ಳಬೇಕಾದರೆ ಮೊದಲು ಗುರುವಿಗೆ ದಾಸನಾಗಿ ಅವರ ಉಪದೇಶದ ಬೆಳಕಿನಲ್ಲಿ ಸಾಧನೆ ಮಾಡಬೇಕು. ಮಾನವ ಜನ್ಮದ ಶ್ರೇಷ್ಠತೆಯನ್ನು ತಮ್ಮ ಬೋಧನೆಗಳಲ್ಲಿ ಕೈವಾರ ತಾತಯ್ಯ ಸಾರಿದ್ದಾರೆ . ಏಕಾಗ್ರತೆಯಿಂದ ತಾತಯ್ಯನವರು ಬೋಧಿಸಿರುವ ತಾರಕ ಮಂತ್ರ ಜಪಿಸಿದರೆ ಪೂರ್ವಕರ್ಮ ನಾಶವಾಗಿ ಮನಸ್ಸು ಸ್ಥಿರವಾಗಿ, ಗುರುವಿನ ಅನುಗ್ರಹ ಸಿಗುತ್ತದೆ ಎಂದು ಹೇಳಿದರು.

 ಪಲ್ಲಕ್ಕಿ ಉತ್ಸವ

ಸದ್ಗುರು ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯನವರ ಪಲ್ಲಕ್ಕಿ ಉತ್ಸವವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ನೆರವೇರಿಸಲಾಯಿತು. ಚಿಂತಾಮಣಿಯ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಕೋಟೆಯ ಶ್ರೀರಾಮ ದೇವಸ್ಥಾನದವರೆಗೂ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಊಟ ಹಾಗೂ ಪ್ರಸಾದ ವಿತರಣೆ ನಡೆಯಿತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಕಾರ್ಮಿಕ ನಿರೀಕ್ಷಕಿ  ವಿಜಯಲಕ್ಷ್ಮಿ, ಬಲಿಜ ಸಂಘದ ಕೃ.ನಾ.ಶ್ರೀನಿವಾಸ್, ಸೋಮಶೇಖರ್, ಶಂಕರ್, ಬಳೆ  ರಘು, ನರೇಶ್, ಡಿಶ್ ಶ್ರೀನಾಥ್, ಡಿ.ವಿ.ವೆಂಕಟೇಶ್, ಶಿವು, ಬಂಗಾರು ಶ್ರೀನಿವಾಸ, ಕೆ.ವೇಣು, ಎಲೆಕ್ಟ್ರಿಕ್ ಸೀನಾ, ಬಳೆ ರಮೇಶ್, ಎನ್. ಮಹೇಶ್, ರವಿ, ಅನಿಲ್ ಕುಮಾರ್, ಹರೀಶ್ ಹಾಜರಿದ್ದರು.


Celebrating the Philosophy of Kaivara Sri Yoginareyana Yathindra

Sidlaghatta : The philosophy and ideals of Kaiwara Sri Yoginareyana Yathindra, a Mahatma who wrote chronology, should be imbibed by everyone in society, according to Grade 2 Tahsildar Srinivasa Naidu. Speaking at the 297th Jayantyutsava program of Kalajnani Sadhguru Sri Yoginareyana Kaivara Tataya, organized by the National Festivals Celebration Committee at the Taluk Office Hall, Naidu highlighted Yogi Narayana Yatindra’s significance to the community.

Sri Yogi Nareyana Yatindra was born and raised in Kaiwara, in the neighboring Chintamani taluk, according to Kaiwara Tathaiya, who spoke at the event. Tathaiya’s clan was involved in the bangle business, but he became an accomplished Yogi and social reformer.

Dr. D. T. Satyanarayan Rao explained that Kalanana is the divine voice that comes out from the face of an ascetic who has attained Yoga Siddhi for the welfare of the world. The voice of eloquent great men reveals future world conditions and instructs people to protect themselves from calamity. Sri Yogi Narayana Kaiwara Tathaiah, who created it, is one such ascetic.

BK Venu, President of the Sadhguru Sri Yoginareyana Tatanavara Aradhakara Committee, emphasized the importance of seeking self-discovery and taking refuge in a worthy Guru. By constant remembrance of the Guru, all kinds of karma are destroyed by the initiation of contemplation within us. In his teachings, Kaivara Tataya preached the greatness of human birth and the power of the Taraka Mantra, which can destroy previous karma, stabilize the mind, and obtain the grace of the Guru.

To celebrate Sadhguru Sri Yogi Nareyana Kaivara Tataya’s Pallakki Utsav, a procession was organized through the main streets of the city, starting from the Sri Anjaneyaswamy Temple on Chintamani Road and ending at the Sri Rama Temple in the fort. Food and prasadam were distributed in the Sri Venugopalaswamy temple hall.

Taluk Health Officer Dr. Venkateshamurthy, DCC Bank Vice President A. Nagaraj, Labor Inspector Vijayalakshmi, Balija Sangh Mr. Srinivas, Somashekhar, Shankar, Bale Raghu, Naresh, Dish Srinath, D.V.Venkatesh, Shiva, Bangaru Srinivasa, K. Venu, Electric Seena, Bale Ramesh, N. Mahesh, Ravi, Anil Kumar, and Harish were present at the event.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version