Home Sidlaghatta ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನ

ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನ

0

Sidlaghatta : ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನದವರೆಗೆ ಪಾದಯಾತ್ರೆಯನ್ನು ಕೈಗೊಂಡಿರುವ ತಿಮ್ಮಪ್ಪನ ಭಕ್ತಾದಿಗಳು ಸೋಮವಾರ ಮುಂಜಾನೆ ಶಿಡ್ಲಘಟ್ಟ ನಗರದ ರಾಷ್ಟ್ರೀಯ ಹೆದ್ದಾರಿ 234ರ ರಸ್ತೆ ಮೂಲಕ ನೆಡೆದುಕೊಂಡು, ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳು ಹೊರಟರು. ತಾಲ್ಲೂಕಿನ ವೈ.ಹುಣಸೇನಹಳ್ಳಿ ವೃತ್ತದಲ್ಲಿ ಉಪಾಹಾರ ಸೇವಿಸಿ ಚಿಂತಾಮಣಿ ಕಡೆ ಹೊರಟರು.

ಸುಮಾರು 22 ವರ್ಷಗಳಿಂದ, ಪ್ರತಿ ವರ್ಷವೂ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಮಾರ್ಗದಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುವ ಮೂಲಕ ಹಳೆಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿಯಿಂದ ಒಂದು ಕುಟುಂಬದ ಅಣ್ಣ-ತಮ್ಮಂದಿರು ಇಬ್ಬರಿಂದ ಪ್ರಾರಂಭವಾದ ಪಾದಯಾತ್ರೆ, ಈಗ 100ಕ್ಕೂ ಹೆಚ್ಚು ಜನ ತಿರುಪತಿಗೆ ಹೊರಡುವ ಕಾರ್ಯಕ್ರಮವನ್ನು ರೂಢಿಸಿಕೊಂಡಿದ್ದಾರೆ. ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಬರುವ ಊರುಗಳಿಂದ ಭಕ್ತಾದಿಗಳು ಸೇರ್ಪಡೆಗೊಂಡು ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ.

ಸರಿ ಸುಮಾರು 23 ವರ್ಷಗಳಿಂದ ತಿರುಪತಿಗೆ ಪಾದಯಾತ್ರೆ ಹೊರಡುವಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಸುಮಾರು 7ರಿಂದ 8 ದಿನದ ಕಾಲ ಕಾಲ್ನಡಿಗೆಯಲ್ಲಿ ದೇವರ ನಾಮಗಳ ಭಜನೆಗಳು ಮಾಡುತ್ತಾ ಪಾದಯಾತ್ರೆ ಮಾಡುತ್ತೇವೆ. ನಮ್ಮ ಉದ್ದೇಶವೇನೆಂದರೆ ರಾಜ್ಯದ ಜನರು ಕೊರೊನಾ ದಿಂದ ತೊಂದರೆಗೊಳಗಾಗಬಾರದು ಹಾಗೂ ಲೋಕಕಲ್ಯಾಣಕ್ಕಾಗಿ ಈ ಪಾದಯಾತ್ರೆಯನ್ನು ಮಾಡುತ್ತಿದ್ದೇವೆ. ತಿರುಪತಿಯಲ್ಲಿ ವೈಕುಂಟ ಏಕಾದಶಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತೇವೆ ಎಂದು ಪಾದಯಾತ್ರೆ ನೇತೃತ್ವ ವಹಿಸಿರುವ ಸುದರ್ಶನ ಸಮಿತಿ ಮುಖ್ಯಸ್ಥ ಶ್ರೀಧರಚಾರಿ ತಿಳಿಸಿದರು

ಪಾದಯಾತ್ರೆಯಲ್ಲಿ ವಿಜಯಶೇಖರರೆಡ್ಡಿ, ಸುಧಾಕರರೆಡ್ಡಿ, ಕೃಷ್ಣಮೂರ್ತಿ, ಅಶ್ವತ್ಥಪ್ಪ, ಮುನಿರಾಮು, ಮಂಜುನಾಥ್, ಆದಿನಾರಾಯಣಪ್ಪ, ರಾಕೇಶ್ ರೆಡ್ಡಿ, ಶ್ರೀನಾಥ, ಶ್ರೀನಿವಾಸರೆಡ್ಡಿ ಪಾಲ್ಗೊಂಡಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version