Home Sidlaghatta ಕ್ಷೀರಕ್ರಾಂತಿಯ ಹರಿಕಾರ ದಿ.ಎಂ.ವಿ.ಕೃಷ್ಣಪ್ಪ ಅವರ ಜನ್ಮ ದಿನಾಚರಣೆ

ಕ್ಷೀರಕ್ರಾಂತಿಯ ಹರಿಕಾರ ದಿ.ಎಂ.ವಿ.ಕೃಷ್ಣಪ್ಪ ಅವರ ಜನ್ಮ ದಿನಾಚರಣೆ

0

Sidlaghatta : ಮಕ್ಕಳಿಂದ ವೃದ್ಧರವರಿಗೂ ಹಾಲು ಉತ್ಕೃಷ್ಠವಾದ ಪೌಷ್ಠಿಕವಾದ ಆಹಾರ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಂಜುನಾಯಕ್ ತಿಳಿಸಿದರು.

ಶಿಡ್ಲಘಟ್ಟ ನಗರದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಶಿಡ್ಲಘಟ್ಟ ಶಿಬಿರದ ಕಚೇರಿಯಿಂದ ವಿಶ್ವ ಹಾಲು ದಿನಾಚರಣೆ ಹಾಗೂ ರಾಜ್ಯದ ಕ್ಷೀರಕ್ರಾಂತಿಯ ಹರಿಕಾರ ದಿ.ಎಂ.ವಿ.ಕೃಷ್ಣಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳ ಹಾಗೂ ಹೊರ ರೋಗಿಗಳಿಗೆ ಗುಡ್‌ಲೈಫ್ ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಹಾಲಿನಲ್ಲಿ ಅಧಿಕವಾದ ಪ್ರೋಟೀನ್ಸ್, ವಿಟಮಿನ್ಸ್, ಕಾರ್ಬೋ ಹೈಡ್ರೈಟ್ಸ್, ಕ್ಯಾಲ್ಸಿಯಂ ಇನ್ನಿತರೆ ದೈಹಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಹಾಲನ್ನು ಕಡ್ಡಾಯವಾಗಿ ಕೊಡಬೇಕು, ಎಲ್ಲ ವಯಸಿನವರೂ ಸಹ ಹಾಲನ್ನು ನಿತ್ಯವು ಬಳಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹಾಲಿನ ಸೇವನೆಯಿಂದ ಸಿಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಲಾಭಗಳನ್ನು ವಿವರಿಸಿದರು.

ಕೋಚಿಮುಲ್ ಶಿಡ್ಲಘಟ್ಟ ಶಿಬಿರದ ಎಂ.ಡಿ.ರವಿಕಿರಣ್ ಮಾತನಾಡಿ, ಪ್ರತಿ ವರ್ಷ ಜೂನ್ 1 ರಂದೆ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ. ಪ್ರತಿನಿತ್ಯ ಹಾಲು ಸೇವನೆ ಅವಶ್ಯಕತೆಗಳ ಬಗ್ಗೆ ತಿಳಿಸಿ ಹಾಲಿನ ಉತ್ಫನ್ನಗಳನ್ನು ವಿವರಿಸಿದ ಅವರು ಶಿಡ್ಲಘಟ್ಟ ತಾಲ್ಲೂಕಿನ ರೈತರು ಹೈನುಗಾರಿಕೆಯನ್ನೆ ಜೀವಾಳವಾಗಿಸಿಕೊಂಡಿರುವರು. ತಾಲ್ಲೂಕಿನಾದ್ಯಂತ 216 ಹಾಲು ಉತ್ಫಾದಕ ಸಹಕಾರ ಸಂಘಗಳು ಹಾಲು ಡೈರಿಗಳನ್ನು ಹೊಂದಿದ್ದು ಪ್ರತಿ ನಿತ್ಯ 1 ಲಕ್ಷ 7 ಸಾವಿರ ಲೀಟರ್ ಒಕ್ಕೂಟಕ್ಕೆ ಉತ್ತಮ ಹಾಲು ಸರಭರಾಜು ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯವರಾದ ಕರ್ನಾಟಕದ ಕ್ಷೀರ ಬ್ರಹ್ಮ ಎಂದೆ ಹೆಸರು ಗಳಿಸಿರುವ ಎಂ.ವಿ.ಕೃಷ್ಣಪ್ಪ ರವರು ದೇಶ ವಿದೇಶಗಳಲ್ಲಿ ಸುತ್ತಿ ಅಲ್ಲಿನ ಜನತೆ ಯಾವ ಉದ್ದಿಮೆಯಲ್ಲಿ ಮುಂದುವರೆಯುತ್ತಿದ್ದಾರೆ ಎಂದು ವೀಕ್ಷಿಸಿ, ವಿದೇಶಗಳಿಂದ ಹೆಚ್ಚು ಹೆಚ್ಚು ಹಾಲು ಕರೆಯುವ ರಾಸುಗಳನ್ನು ತಂದು ಎರಡೂ ಜಿಲ್ಲೆಗಳಲ್ಲಿ ಕ್ಷೀರ ಕ್ರಾಂತಿಯನ್ನೆ ಮಾಡಿ ಜಿಲ್ಲೆಯ ಜನತೆ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದ್ದಾರೆ. ಇಂತಹ ಮಹಾ ಪುರುಷರ ಆದರ್ಶಗಳು ಮತ್ತು ವಿಚಾರದಾರಣೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದರು.

ಎಂ.ಡಿ.ಡಾ.ರವಿಕಿರಣ್, ಇಒ.ಉಮೇಶ್‌ರೆಡ್ಡಿ, ಇಒ.ಜಯಚಂದ್ರ, ಇಒ.ಶಂಕರ್ ಕುಮಾರ್, ಇಒ.ಮಂಜುನಾಥ, ಇಒ.ಗುಲಾಬ್‌ಜಾನ್, ಸಿದ್ದೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾದಿಕಾರಿ ಡಾ.ಮಂಜುನಾಯಕ್, ಆಸ್ಪತ್ರೆ ಸಿಬ್ಬಂದಿ ಅಕ್ಕಲರೆಡ್ಡಿ, ನಬೀಬುಲ್ಲಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version