Home Sidlaghatta 8 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ನಾಶ

8 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ನಾಶ

0

Sidlaghatta : ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ಬುಧವಾರ ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಗ್ರೇಟ್ 2 ತಹಶೀಲ್ದಾರ್ ಶ್ರೀನಿವಾಸ್ ನಾಯ್ಡು ರವರ ಸಮ್ಮುಖದಲ್ಲಿ ಸಂಪೂರ್ಣ ನಾಶಪಡಿಸಿದರು.

ನಗರದ ಹೊರವಲಯದ ಬೂದಾಳ ಬಳಿ ಕೆರೆಯಲ್ಲಿ ಶಿಡ್ಲಘಟ್ಟ ಅಬಕಾರಿ ನಿರೀಕ್ಷಕ ಆರ್.ಸುರೇಶ್ ನೇತೃತ್ವದಲ್ಲಿ ಅಬಕಾರಿ ಸಿಬ್ಬಂದಿ ಹೊರ ರಾಜ್ಯದ ಹಾಗೂ ಅಕ್ರಮವಾಗಿ ವಶಪಡಿಸಿಕೊಂಡ ಮದ್ಯದ ಬಾಟಲ್ ಮತ್ತು ಪಾಕೇಟ್ ಗಳನ್ನು ವಾಹನ ಹರಿಸಿ ನಾಶಪಡಿಸಿದರು.

2021 ರಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾದೂರು ಗ್ರಾಮದ ರೇಷ್ಮೆ ಹುಳು ಸಾಕಾಣಿಕೆ ತೋಟದ ಮನೆಯಲ್ಲಿ ತಮಿಳುನಾಡಿನ (ಹೊರ ರಾಜ್ಯ)ದ ಲೇಬಲ್ ಹೊಂದಿದ್ದ ಅಕ್ರಮ ಮದ್ಯವನ್ನು ತಯಾರು ಮಾಡುತ್ತಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು ವಶ ಪಡಿಸಿಕೊಂಡ ಮದ್ಯದ ಬಾಟಲ್, ಮಿಶ್ರಣಕ್ಕೆ ಬಳೆಸುವ ಕೆಮಿಕಲ್ ಮತ್ತು ಅಕ್ರಮ ಸಾಗಾಣಿಕೆ ಹಾಗೂ ಗ್ರಾಮಗಳಲ್ಲಿ ಕಳ್ಳತನದಿಂದ ವ್ಯಾಪಾರ ಮಾಡುತ್ತಿರುವರಿಂದ ವಶಪಡಿಸಿಕೊಂಡ ಮದ್ಯವನ್ನು ನಾಶ ಪಡಿಸಿದರು.

ಎರಡು ವರ್ಷಗಳಿಂದ ವಶಪಡಿಸಿಕೊಂಡ ಸುಮಾರು 8 ಲಕ್ಷಕ್ಕೂ ಅಧಿಕ ಮೊತ್ತದ ಮದ್ಯವನ್ನು ಅಬಕಾರಿ ವಾಹನದಿಂದ ನಾಶ ಪಡಿಸಿದ್ದಾರೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version