Home Sidlaghatta ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಅಭಿಯಾನ

ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಅಭಿಯಾನ

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪೊಲೀಸ್ ಇಲಾಖೆಯ ವತಿಯಿಂದ ನಡೆದ “ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಅಭಿಯಾನ” (Anti-Narcotics Awareness Programme) ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ (Rural Police Station) PSI ಸೌಜನ್ಯ ಅವರು ಮಾತನಾಡಿದರು.

ಮಾದಕ ವಸ್ತುಗಳ ಮಾರಾಟ ಹಾಗೂ ಸಂಗ್ರಹಿಟ್ಟುಕೊಳ್ಳುವುದು ಘೋರ ಅಪರಾಧ. ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ಹೇಳಿದರು. ಮಾದಕ ವಸ್ತು ಸೇವನೆ, ಕುಡಿತದ ಚಟಕ್ಕೆ ದಾಸರಾದರೆ ಇದರಿಂದ ಹೊರ ಬರುವುದು ಕಷ್ಟಕರ. ಜತೆಗೆ, ಜೀವನ ಹಾಳಾಗುತ್ತದೆ. ಜೀವನದಲ್ಲಿ ಮುಂದೆ ಚೆನ್ನಾಗಿ ಬದುಕಬೇಕೆಂದರೆ ಮಕ್ಕಳು ಈಗಿನಿಂದಲೇ ಚೆನ್ನಾಗಿ ಓದಬೇಕು, ತಂದೆ ತಾಯಿಗೆ ಮನೆಯಲ್ಲಿ ನೆರವಾಗಬೇಕು, ಒಳ್ಳೆಯ ಹವ್ಯಾಸವನ್ನು, ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಹಾಗಾಗಿ, ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.

ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಸಿಕ್ಕಿಕೊಂಡರೆ 20 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಂಥಹ ವಸ್ತುಗಳ ಮಾರಾಟ ಮಾಡುತ್ತಿರುವುದು ಕಂಡುಬಂದರೆ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.

ಮಾದಕ ವಸ್ತುಗಳಿಂದ ಆಗುವ ತೊಂದರೆಗಳು, ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸಮಸ್ಯೆಗಳ ಬಗ್ಗೆ ಉದಾಹರಣೆಗಳೊಂದಿಗೆ ಮಕ್ಕಳಿಗೆ ವಿವರಿಸಿ, ನಿಮ್ಮ ಪೋಷಕರು ಕಷ್ಟಪಟ್ಟು ನಿಮ್ಮನ್ನು ಓದಿಸಿ, ಬೆಳೆಸುತ್ತಿದ್ದಾರೆ. ಮುಂದೆ ನೀವು ಜೀವನದಲ್ಲಿ ಚೆನ್ನಾಗಿ ಸಂಪಾದಿಸುವಂತಾದರೆ ಮಾತ್ರ ಅವರನ್ನು ನೀವು ಸುಖವಾಗಿ ನೋಡಿಕೊಳ್ಳಲು ಸಾಧ್ಯ. ಅದಕ್ಕಾಗಿ ನೀವು ಈಗಿನಿಂದಲೇ ಕೆಟ್ಟದ್ದರಿಂದ ದೂರವಿರಬೇಕು ಎಂದು ವಿವರಿಸಿ, ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಮಕ್ಕಳಿಗೆ ನೀಡಿದರು.

ಶಾಲೆಯ ವಿದ್ಯಾರ್ಥಿಗಳು, ಹಳ್ಳಿಗಳಲ್ಲಿನ ಮದ್ಯ ಮಾರಾಟ, ಬಾಲ್ಯ ವಿವಾಹ, ಬೀಡಿ ಸಿಗರೇಟನ್ನು ಮಾರಾಟ ಮಾಡುವ ಬಗ್ಗೆ ಹಾಗೂ ಮಾದಕ ವಸ್ತುಗಳು ಸಿಗದ ಹಾಗೆ ಏಕೆ ಮಾಡಬಾರದು ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀನಿವಾಸ್, ಪೇದೆ ಮಹಾನಂದ, ಮುಖ್ಯ ಶಿಕ್ಷಕ ಜಿ.ವೆಂಕಟೇಶ್, ಶಿಕ್ಷಕರಾದ ನಾಗಭೂಷಣ್, ಎಂ.ಎ.ರಾಮಕೃಷ್ಣಪ್ಪ, ಗಂಗಶಿವಪ್ಪ, ರಮಾದೇವಿ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version