Bagepalli : ಬಾಗೇಪಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ಲಂಬಾಣಿ (Lambhani) ಸಮುದಾಯದವರು ಮಾರಮ್ಮ ದೇವಾಲಯದಲ್ಲಿ 18ನೇ ವರ್ಷದ ತಂಬಿಟ್ಟು ದಿಪೋತ್ಸವ (Deepotsava) ಜಾತ್ರೆ ನಡೆಸಿದರು.
ಲಂಬಾಣಿ ಸಮುದಾಯದ ಮಹಿಳೆಯರು ಮತ್ತು ಯುವತಿಯರು ತಂಬಿಟ್ಟು ದೀಪೋತ್ಸವದ ಮೆರವಣಿಗೆ ನಡೆಸಿ ಮಾರಮ್ಮ ದೇವಿಗೆ ದೀಪ ಬೆಳಗಿಸಿದರು. ಉತ್ತಮ ಮಳೆಬೆಳೆ ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತು ಆರತಿ ಪೂಜೆ ಸಲ್ಲಿಸಿದರು.