Bagepalli : ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿಯಲ್ಲಿ ಶನಿವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಪಿಂಚಿಣಿ (Pension) ಆದೇಶ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (MLA S. N. Subbareddy) ಫಲಾನುಭವಿಗಳಿಗೆ ಪಿಂಚಿಣಿ ಆದೇಶ ಪತ್ರಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಸರ್ಕಾರದ ಯೋಜನೆ ಹಾಗೂ ಅನುದಾನ ಅನೇಕ ವರ್ಷ ಕಳೆದರೂ ಇದುವರಿಗೂ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ. ಗ್ರಾಮಗಳಲ್ಲಿನ ವೃದ್ಧಾಪ್ಯ, ಸಂಧ್ಯಾಸುರಕ್ಷಾ, ಅಂಗವಿಕಲರಿಗೆ, ದರಖಾಸ್ತು, ಸರ್ಕಾರಿ ಭೂಮಿಯಲ್ಲಿ ಇರುವವರಿಗೆ, ನಿವೇಶನ ರಹಿತರಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳನ್ನು ಮನೆಗಳಿಗೆ ಅಧಿಕಾರಿಗಳು ಭೇಟಿ ಮಾಡಿ ಸರ್ವೆ ಮಾಡಿ ಅರ್ಹ ಫಲಾನುಭವಿಗಳ ಪಟ್ಟಿ ಮಾಡಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು” ಎಂದು ಹೇಳಿದರು.
ಉಪತಹಶೀಲ್ದಾರ್ ವಿದ್ಯಾ, ಗ್ರೇಡ್-2 ತಹಶೀಲ್ದಾರ್ ಸುಬ್ರಮಣ್ಯಂ, ರಾಜಸ್ವ ನಿರೀಕ್ಷಕ ಎನ್.ಉದಯ್ ಕುಮಾರ್, ಮಿಟ್ಟೇಮರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್, ಗ್ರಾಮಲೆಕ್ಕಿಗರಾದ ಮಾಳಪ್ಪ, ವೆಂಕಟೇಶ್,ಕುಮಾರ್, ಮುಖಂಡರಾದ ಅಮರ ನಾಥರೆಡ್ಡಿ, ನರಸಿಂಹಪ್ಪ, ಮಂಜುನಾಥ ರೆಡ್ಡಿ, ನರಸಿಂಹಮೂರ್ತಿ, ವೆಂಕಟರಾಮರೆಡ್ಡಿ,ರವಿಕುಮಾರ್, ಶಿವಕುಮಾರ್ ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur