Chikkaballapur : ದಿನಾಂಕ 17/11/2021 ಬುಧವಾರ ರಂದದಂದು ಗೌರಿಬಿದನೂರು 220/66 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿನ 100 M.V.A ವಿದ್ಯುತ್ ಪರಿವರ್ತಕ/ಸ್ವೀಕರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ ವತಿಯಿಂದ ನಿರ್ವಹಣೆ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಈ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಹೋಗುವ 66 ಕೆ.ವಿ ವಿದ್ಯುತ್ ಮಾರ್ಗಗಳಿಂದ ಸರಬರಾಜಾಗುವ ಗೌರಿಬಿದನೂರು, ರಮಾಪುರ, ಮಂಚೇನಹಳ್ಳಿ,ತೊಂಡೇಬಾವಿ, ವಿಧುರಾಶ್ವತ್ಥ, ಮಂಡಿಕಲ್, ಗುಡಿಬಂಡೆ, ಡಿ ಪಾಳ್ಯ , ಎಸಿಸಿ ಇ.ಹೆಚ್.ಸಿ 66/11 ಕೆ.ವಿ ಉಪ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದ್ದು, ಈ ಉಪ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ Load Shedding ಉಂಟಾಗಲಿದ್ದು ಗ್ರಾಹಕರು ಹಾಗು ಸಾರ್ವಜನಿಕರು ಸಹಕರಿಸಬೇಕೆಂದು ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಗೌರಿಬಿದನೂರು
ಗೌರಿಬಿದನೂರು ನಗರ ಸೇರಿದಂತೆ ತಾಲ್ಲೂಕಿನ ತೋಂಡೀಬಾವಿ, ಅಲ್ಲೀಪುರ, ಹೊಸೂರು, ರಮಾಪುರ, ಮಂಚೇನಹಳ್ಳಿ,ತೊಂಡೇಬಾವಿ, ವಿಧುರಾಶ್ವತ್ಥ, ಹಳೇಹಳ್ಳಿ,ತರಿದಾಳು, ಮಿಣುಕನಗುರ್ಕಿ, ಪುರ, ಬಿಸಲಹಳ್ಳಿ, ದೊಡ್ಡಕುರುಗೋಡು, ಹೆಚ್.ನಾಗಸಂದ್ರ, ಬೈಚಾಪುರ, ಕುಡುಮಲಕುಂಟೆ ಕೈಗಾರಿಕಾ ಪ್ರದೇಶ, ಹಿರೇಬಿದನೂರು, ಮುದುಗೆರೆ, ಕಲ್ಲೂಡಿ ಗ್ರಾಮಗಳಿಗೆ, A.F.T.L , ಗ್ರೀನ್ ಎನರ್ಜಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳಿಗೆ.
ಗುಡಿಬಂಡೆ
ಗುಡಿಬಂಡೆ ಪಟ್ಟಣ ಸೇರಿದಂತೆ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ, ಗರುಡಾಚಾರಲಹಳ್ಳಿ, ಬೋಗೇನಹಳ್ಳಿ, ಪೋಲಂಪಲ್ಲಿ, ಕಡೇಹಳ್ಳಿ
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್, ಗುಂಡ್ಲಮಂಡಿಕಲ್, ಬಾಚೇನಹಳ್ಳಿ, ಅವಲಬೆಟ್ಟ, ಕಮ್ಮಗುಟ್ಟಹಳ್ಳಿ, ನವಿಲುಗುರ್ಕಿ, ಪೈಯೂರು, ಒಂಟೂರು, ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ
ಶಿಡ್ಲಘಟ್ಟ
ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆಯ 66/11 ಕೆವಿ ಉಪವಿದ್ಯುತ್ ಕೇಂದ್ರದಿಂದ ದಿಬ್ಬೂರಹಳ್ಳಿಯ 66/11 ಕೆವಿ ಉಪವಿದ್ಯುತ್ ಕೇಂದ್ರಕ್ಕೆ ಹಾದು ಹೋಗಿರುವ ಮಾರ್ಗಕ್ಕೆ ಕಾರಿಡಾರ್ ಟವರ್ ಅಳವಡಿಸುವ ಕಾಮಗಾರಿಯನ್ನು ಕೈಗೊಂಡಿರುವುದರಿಂದ ದಿಬ್ಬೂರಹಳ್ಳಿ 66/11 ಕೆವಿ ಉಪವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ಉಪವಿದ್ಯುತ್ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ
ಇ-ತಿಮ್ಮಸಂದ್ರ, ಕೋರ್ಲಪರ್ತಿ, ಆನೆಮಡುಗು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ಬೈರಗಾನಹಳ್ಳಿ, ತಲಕಾಯಲಬೆಟ್ಟ, ಬಯಪ್ಪನಹಳ್ಳಿ,
ದಿಬ್ಬೂರಹಳ್ಳಿ, ದ್ಯಾವಪ್ಪನಗುಡಿ, ಸಾದಲಿ, ದ್ಯಾವರಹಳ್ಳಿ, ರಾಯಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ
ದಿನಾಂಕ 17/11/2021 ರಂದು ಬೆಳ್ಳಗ್ಗೆ10:00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಹಾಗು ಸಾರ್ವಜನಿಕರು ಸಹಕರಿಸಬೇಕೆಂದು ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ