Home News ಚಿಕ್ಕಬಳ್ಳಾಪುರ APMC ಗೆ 27 ರಿಂದ ರಜೆ

ಚಿಕ್ಕಬಳ್ಳಾಪುರ APMC ಗೆ 27 ರಿಂದ ರಜೆ

0
Chikkaballapur APMC Agriculture Farmers Market

Chikkaballapur: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೇ 27ರಿಂದ 30ರವರೆಗೆ ಪೂರ್ಣ ಲಾಕ್‌ಡೌನ್ ‍ಇರುವುದರಿಂದ ಚಿಕ್ಕಬಳ್ಳಾಪುರ APMC ಮಾರುಕಟ್ಟೆಗೆ (ಮುಖ್ಯ ಮಾರುಕಟ್ಟೆ ಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ ಹಾಗೂ ತಾತ್ಕಾಲಿಕವಾಗಿ ಕೆ.ವಿ.ಕ್ಯಾಂಪಸ್ ಹತ್ತಿರ ಸ್ಥಳಾಂತರಿಸಿರುವ ಹೂವಿನ ಮಾರುಕಟ್ಟೆ) 4 ದಿನಗಳ ರಜೆ ಘೋಷಿಸಲಾಗಿದೆ.

ಈ ದಿನಗಳಂದು ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ಹಾಗೂ ಪ್ರಾಂಗಣದ ಪ್ರವೇಶ ನಿಷೇಧಿಸಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದು ಆದೇಶ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು. ರೈತರು, ಪೇಟೆ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಫೈಸಲ್ ಅಹ್ಮದ್ ಹಕೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version