Friday, March 24, 2023
HomeGauribidanurತೊಂಡೇಬಾವಿ ಹೋಬಳಿ ಹುಸೇನಪುರದ ಜಾನುವಾರುಗಳ ಕುಂಟೆ

ತೊಂಡೇಬಾವಿ ಹೋಬಳಿ ಹುಸೇನಪುರದ ಜಾನುವಾರುಗಳ ಕುಂಟೆ

- Advertisement -
- Advertisement -
- Advertisement -
- Advertisement -

ಗೌರಿಬಿದನೂರು (Gauribidanur) ತಾಲ್ಲೂಕಿನ ತೊಂಡೇಬಾವಿ (Thondebavi) ಹೋಬಳಿ ರೆಡ್ಡಿದ್ಯಾವರಹಳ್ಳಿ ಮತ್ತು ಹನುಮೇನಹಳ್ಳಿ ಮಧ್ಯ ಇದೆ ಜಾನುವಾರುಗಳ ಹುಸೇನಪುರದ (Hussainpur Lake) ಕುಂಟೆ.

ದೇಶದ ಸ್ವಾತಂತ್ರ‍್ಯಪರ‍್ವ ದಿನಗಳಿಂದಲೇ ಹುಸೇನಪುರದ ಗ್ರಾಮಸ್ಥರು ಜಾನುವಾರುಗಳಿಗೆಂದೇ ಪ್ರತ್ಯೇಕ ಕುಂಟೆ ನಿರ್ಮಿಸಲು ಯೋಜನೆ ರೂಪಿಸಿತೊಡಗಿದರು. ಹುಸೇನಪುರದ ಗೌಡ ಎಂಬುವರು ರೆಡ್ಡಿದ್ಯಾವರಹಳ್ಳಿ ಮತ್ತು ಹನುಮೇನಹಳ್ಳಿ ಗ್ರಾಮಗಳ ಮಧ್ಯ ಇರುವ ಬೆಟ್ಟಗಳಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ದೊಡ್ಡ ಕುಂಟೆ ನಿರ್ಮಿಸಿದರು. ಅದೇ ಕಾರಣಕ್ಕೆ ಇದು ಈಗ ಹುಸೇನ್ ಪುರದ ಕುಂಟೆಯೆಂದು ಕರೆಯಲ್ಪಡುತ್ತದೆ. ಎಂತಹ ಬರಗಾಲ ಬಂದರೂ ಈ ಕುಂಟೆಯಲ್ಲಿ ನೀರು ಖಾಲಿ ಆಗುವುದಿಲ್ಲ. ಸುತ್ತಮುತ್ತಲಿನ 10 ರಿಂದ 15 ಗ್ರಾಮಗಳ ಜನರು ತಮ್ಮ ದನಕರುಗಳಿಗೆ ನೀರು ಕುಡಿಸಲು ಇಲ್ಲಿಗೆ ಬರುತ್ತಾರೆ.

ಈ ಕುಂಟೆಗೆ ಮೊದಲು ತೂಬು ಇತ್ತಂತೆ. ಕೆಲವರು ತೂಬನ್ನು ಕಿತ್ತು ದನಕರುಗಳಿಗೆ ಕುಡಿಯಲು ನೀರು ಇಲ್ಲದಂತೆ ಪೋಲು ಮಾಡುತ್ತಿದ್ದರು. ಇದನ್ನರಿತ ಕೆಲ ಗ್ರಾಮಸ್ಥರು ಶಾಶ್ವತವಾಗಿ ತೂಬನ್ನು ಮುಚ್ಚಿ ಕುಂಟೆಯಲ್ಲಿ ನೀರು ನಿಲ್ಲುವಂತೆ ಮಾಡಿದ್ದಾರೆ. ಈ ಕುಂಟೆಯಲ್ಲಿ ನೀರು ಇರುವ ಕಾರಣದಿಂದಲೇ ಜಾನುವಾರುಗಳ ಬಾಯಾರಿಕೆ ತಣಿಯುತ್ತದೆ.

ಜಾನುವಾರುಗಳ ಬಾಯಾರಿಕೆ ತಣಿಸುವುದಲ್ಲದೇ ಈ ಕುಂಟೆಯು ಆಗಾಗ್ಗೆ ಸುತ್ತಮುತ್ತಲಿನ ಅಗಸರು ತಮ್ಮ ಬಟ್ಟೆಗಳನ್ನು ಈ ಕುಂಟೆಯಲ್ಲಿ ಶುಚಿಗೊಳಿಸುತ್ತಿದ್ದರು. ಸುತ್ತಮುತ್ತಲಿನ ಗ್ರಾಮಗಳ ಹುಡುಗರು ಈ ಕುಂಟೆಯಲ್ಲಿ ಈಜು ಕಲಿಯುತ್ತಾರೆ. ಈ ಕುಂಟೆ ಸುತ್ತಮುತ್ತಲ ಗ್ರಾಮಗಳಿಗೆ ಐದಾರು ಮೈಲು ದಲ್ಲಿರುವುದರಿಂದ ಮತ್ತು ಬೆಟ್ಟಗಳ ಮಧ್ಯೆ ನಿರ್ಜನ ಪ್ರದೇಶದಲ್ಲಿ ಇರುವುದರಿಂದ ಒಬ್ಬೊಬ್ಬರೇ ಬರಲು ಹೆದರುತ್ತಾರೆ, ಆದ್ದರಿಂದ ಈ ಕುಂಟೆಯು ತನ್ನ ಅಸ್ತಿತ್ವ ಕಾಯ್ದುಕೊಂಡಿದೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!