Home News Chikkaballapur ಉಚಿತ ಹೊಲಿಗೆ ಯಂತ್ರ ಮತ್ತು ಉಪಕರಣಗಳಿಗೆ ಅರ್ಜಿ ಆಹ್ವಾನ: ನವೆಂಬರ್ 20 ಕೊನೆ ದಿನ

ಉಚಿತ ಹೊಲಿಗೆ ಯಂತ್ರ ಮತ್ತು ಉಪಕರಣಗಳಿಗೆ ಅರ್ಜಿ ಆಹ್ವಾನ: ನವೆಂಬರ್ 20 ಕೊನೆ ದಿನ

0
Electric sewing machine with scissors on a tailoring table
Image: Wikimedia Commons, CC0 public domain (cropped)

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ವೃತ್ತಿನಿರತ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಕುಶಲಕರ್ಮಿಗಳಿಗೆ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

Quick facts: The Industries and Commerce department invites online applications for free electric sewing machines (for working women) and tool kits (for carpenters, masons, washermen, barbers, blacksmiths and stone workers) in gram panchayat areas; documents are due by November 20.

ಯಾರು ಅರ್ಜಿ ಸಲ್ಲಿಸಬಹುದು?

ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಭಾಗದ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವೃತ್ತಿ ನಿರತ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡಲಾಗುತ್ತದೆ. ಬಡಗಿ, ಗಾರೆ, ದೋಬಿ, ಕ್ಷೌರಿಕ, ಕಮ್ಮಾರಿಕೆ ಮತ್ತು ಕಲ್ಲು ಕೆಲಸದ ಕುಶಲಕರ್ಮಿಗಳು ಕಸುಬು ಅಭಿವೃದ್ಧಿಗಾಗಿ ಸುಧಾರಿತ ಉಪಕರಣಗಳನ್ನು ಪಡೆಯಲು ಆಸಕ್ತರಾಗಿದ್ದರೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ನಮೂನೆಯನ್ನು chikkaballapur.nic.in ವೆಬ್‌ಸೈಟ್‌ನಲ್ಲಿ ತೆರೆದು, ಅರ್ಜಿಯೊಂದಿಗೆ ಎಲ್ಲಾ ದಾಖಲೆಗಳನ್ನು ನವೆಂಬರ್ 20ರೊಳಗೆ ಅಪ್‌ಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ಬಿ.ಬಿ.ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಉಪನಿರ್ದೇಶಕರ (ಗ್ರಾಕೈ) ಕಚೇರಿ ಅಥವಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಚಿಂತಾಮಣಿ ಮತ್ತು ಶಿಡ್ಲಘಟ್ಟ: 9972095093; ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ: 9741234125.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

What is the last date to upload documents?
November 20, 2026.
Where is the application form available?
On the district website, chikkaballapur.nic.in.
Who can I call for details?
For Chintamani and Sidlaghatta call 9972095093; for Bagepalli, Gauribidanur, Chikkaballapur and Gudibande call 9741234125.

Stay tuned for more local updates.

Save progress on every phone.

Name, email, photo only. No password. By continuing you agree to the Terms and Privacy Notice.

error: Content is protected !!
Exit mobile version