Chikkaballapur : CITU ಸಂಯೋಜಿತ ರಾಜ್ಯ ಗ್ರಾಮ ಪಂಚಾಯಿತಿ (Grama Panchayat) ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನ ಹೆಚ್ಚಳ, Covid-19 ನಿಂದ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ (Deputy Commissioner Office) ಎದುರು ಪ್ರತಿಭಟಿಸಿದರು (Protest). ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡಬೇಕು. ಬಡ್ತಿ ನೀಡುವಾಗ ಅಟೆಂಡರ್, ವಾಟರ್‌ಮೆನ್ ಮತ್ತು ಸ್ವಚ್ಛತಾಗಾರರನ್ನೂ ಪರಿಗಣಿಸಬೇಕು. ಅನುಕಂಪದ ನೇಮಕಾತಿ, ಉಪಧನ, ಕನಿಷ್ಠ ವೇತನ, ತಿಟ್ಟಿಭತ್ಯೆ ಒಳಗೊಂಡ ಸರ್ಕಾರಿ ಆದೇಶಗಳನ್ನು ಪಂಚಾಯಿತಿ ಮಟ್ಟದಲ್ಲಿಯೂ ಜಾರಿಗೊಳಿಸಬೇಕು. ಜ್ಯೇಷ್ಠತಾ ಪಟ್ಟಿಯ ಪ್ರಕಾರ ಬಿಲ್‌ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಬ್ಬಂದಿಯ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ನೀಡಿದರು ಯಾವುದೇ ಪ್ರಯೋಜನೆಯಾಗಿಲ್ಲ. ಜಿ.ಪಂ ಸಿಇಒ ಅವರೇ ನಮಗೆ ನಿಮ್ಮ ಭರವಸೆಗಳು ಬೇಡ ಸಮಸ್ಯೆಗಳನ್ನು ಪರಿಹರಿಸಿ. ಸಮಸ್ಯೆಗಳನ್ನು ಪರಿಹರಿಸದಿದ್ದರೆ ದಿನಕ್ಕೊಂದು ಪಂಚಾಯಿತಿಯವರು ಆಯಾ ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಕೆಲಸದಿಂದ ಕಿತ್ತು ಹಾಕುತ್ತೇವೆ ಎಂದು ಅಧಿಕಾರಿಗಳು ಬೆದರಿಕೆ ಹಾಕಬಹುದು. ಆದರೆ ಯಾರ ಬೆದರಿಕೆಗೂ ಜಗದ್ದೇ ಎಲ್ಲರೂ ಒಗ್ಗಟ್ಟಿನಿಂದ ಪ್ರತಿಭಟಿಸಿ ನಮ್ಮ ಸಮಸ್ಯೆಗಳಿಗೆ ಈ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಹೇಳಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡರಾದ ಕೆ.ಎನ್.ಪಾಪಣ್ಣ, ರಾಮಕೃಷ್ಣಪ್ಪ, ಪಯಾಜುಲ್ಲಾ, ಶ್ರೀನಿವಾಸ್, ಈಶ್ವರಪ್ಪ, ವೆಂಕಟರಾಮು, ಶಂಕರಪ್ಪ, ನರಸಿಂಹಮೂರ್ತಿ, ವೆಂಕಟೇಶ್, ಅಶ್ವತ್ಥಪ್ಪ, ಅಶೋಕ್ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur