Chikkaballapur : ಭಾನುವಾರ ಚಿಕ್ಕಬಳ್ಳಾಪುರ ನಗರದ ನಂದಿ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ನಗರ ಮತ್ತು ಕಸಬಾ ಹೋಬಳಿ ಘಟಕದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಶಿಕ್ಷಕ ಸರ್ದಾರ್ ಚಾಂದ್ ಪಾಷ ” ಕನ್ನಡ ಸಾಹಿತ್ಯ ಪರಿಷತ್ ಕಾವ್ಯ, ಕಾದಂಬರಿಗಳಿಷ್ಟೇ ಸೀಮಿತವಾಗದೆ ರೈತರ ಮನೆಬಾಗಿಲಿಗೆ ಕೃಷಿ ಸಾಹಿತ್ಯವನ್ನ ಪಸರಿಸುವ ಕೆಲಸ ಮಾಡಬೇಕು. ಕೃಷಿಕರಿಗೆ ಹೊಸ ಆವಿಷ್ಕಾರಗಳು ತಲುಪಿಸುವ ಕೆಲಸ ಮಾಡಿದರೆ ಕಸಾಪವು ಇನ್ನಷ್ಟು ವಿಸ್ತರವಾಗುತ್ತದೆ ” ಎಂದು ಹೇಳಿದರು.
ಪದಾಧಿಕಾರಿಗಳು: ನಗರ ಮತ್ತು ಕಸಬಾ ಹೋಬಳಿ ಘಟಕದ ಅಧ್ಯಕ್ಷೆಯಾಗಿ ಜಿ.ಎಸ್.ನಳಿನಾಕ್ಷಿ, ಗೌರವ ಕಾರ್ಯದರ್ಶಿಯಾಗಿ ಜಯಭಾರತಿ, ಗೌರವ ಕೋಶಾಧ್ಯಕ್ಷರಾಗಿ ಜಯಮ್ಮ, ಸಹಕಾರ್ಯದರ್ಶಿಗಳಾಗಿ ಪ್ರಭಾವತಿ, ಸುಬ್ಬಲಕ್ಷ್ಮಿ, ಸಂಘಟನಾ ಕಾರ್ಯದರ್ಶಿಗಳಾಗಿ ನಿರ್ಮಲಾರಾಜ್, ನಳಿನಿ ವಾಸುದೇವ್, ಜಂಟಿ ಕಾರ್ಯದರ್ಶಿಗಳಾಗಿ ಲೀಲಾ ಶ್ರೀರಾಮಯ್ಯ, ಭಾರತೀದೇವಿ, ಮಹಿಳಾ ಪ್ರತಿನಿಧಿಗಳಾಗಿ ಸರಳಾ ಅಮರನಾಥ್, ಚ.ಸು.ಸುಜಾತ, ಪ್ರತಿನಿಧಿಗಳಾಗಿ ಅಣ್ಣಮ್ಮ, ಮಂಜುಳಾ ರಾಮಣ್ಣ, ನಾಗಮಣಿ, ವಹೀದಾ ಭಾನು, ಶ್ರೀನಿವಾಸ್, ಪ್ರಭಾವತಿ ಪ್ರಮಾಣ ಪತ್ರ ಸ್ವೀಕರಿಸಿದರು.
ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ನಾಗಭೂಷಣ ರೆಡ್ಡಿ, ಸರಸಮ್ಮ, ರೂಪಾ ರಾಘವೇಂದ್ರ, ಶೋಭಶ್ರೀ, ಭಾರತಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur