- Advertisement -
- Advertisement -
- Advertisement -
- Advertisement -
Gudibande : Covid-19 ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಸೊಪ್ಪಿನ ಪೇಟೆ ಜಾಲಾರಿ ಸಪ್ಪಲಮ್ಮ ದೇವಿಯ ಕರಗ ಮಹೋತ್ಸವ (Jalari Sappalamma Devi Karaga), ಪುರಾತನ ಏಡುಗರ ಅಕ್ಕಮ್ಮ ದೇವಿಗೆ ಉಟ್ಲುಪರಷೆ (Akkamma Devi Utlu Parishe) ಹಾಗೂ ಗ್ರಾಮ ದೇವತೆಗಳಿಗೆ ದೀಪೋತ್ಸವ ನಡೆಯಲಿದೆ.
ಮಂಗಳವಾರ ಮಧ್ಯಾಹ್ನದಿಂದ ದೀಪಗಳನ್ನು ಹೊತ್ತ ಮಹಿಳೆಯರು ಈ ವರ್ಷ ಉತ್ತಮ ಮಳೆ, ಬೆಳೆ ಬರಲಿ ಎಂದು ಪ್ರಾರ್ಥಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವತೆಗಳಿಗೆ ವಿಶೇಷವಾದ ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -