Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿಗಳ (Deputy Commissioner) ಕಛೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ (Maha Yogi Vemana Jayanti) ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್ ಭಾಗವಹಿಸಿ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಗಳು “ಜೀವನದ ಸಂಕಷ್ಟದ ಸಂದರ್ಭಗಳಲ್ಲಿ ಮನುಷ್ಯ ಕೆಟ್ಟ ನಿರ್ಧಾರ ತೆಗೆದುಕೊಳ್ಳದೆ, ಮನಸ್ಸನ್ನು ಜನಪರವಾಗಿ ಪರಿವರ್ತಿಸಿಕೊಂಡು ಮೌಲ್ಯಯುತ ಹಾಗೂ ಅರ್ಥಪೂರ್ಣವಾಗಿ ಬದುಕುವುದು ಮುಖ್ಯ. ಮಹಾಮುನಿ ವೇಮನ ತಿಳಿಸಿದಂತೆ ಸನ್ನಿವೇಶದ ಶಿಶುವಾಗಿರುವ ಮಾನವ ಪಂಚೇಂದ್ರಿಗಳನ್ನು ಸಂಪೂರ್ಣವಾಗಿ ಅನುಭವಿಸುವುದೇ ಜೀವನ. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡ ವ್ಯಕ್ತಿಗಳಿಗೆ ಅವರ ತಪ್ಪುಗಳನ್ನು ಅರ್ಥೈಸಿ ಬದುಕಲು ಅವಕಾಶ ಕೊಟ್ಟಾಗ ಅವರು ಉತ್ತುಂಗಕ್ಕೆ ಹೋಗುತ್ತಾರೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ಡಿ ಸಮುದಾಯ ಸಂಘದ ಅಧ್ಯಕ್ಷರಾದ ಅಂಜನ್ ರೆಡ್ಡಿ, ಉಪಾಧ್ಯಕ್ಷರಾದ ಪಾಪಣ್ಣ ಮತ್ತು ಶಿವಣ್ಣ, ಜಿಲ್ಲಾ ಖಜಾಂಚಿಯ ಮುಖಂಡರಾದ ರಾಮಚಂದ್ರರೆಡ್ಡಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಗೌರವಾಧ್ಯಕ್ಷರಾದ ನಾಗರಾಜರೆಡ್ಡಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.