Bagepalli, Chikkaballapur District : ಬಾಗೇಪಲ್ಲಿ ಪಟ್ಟಣದ ಸತ್ಯಸಾಯಿ ಧರ್ಮಶಾಲಾದಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ನೂತನ ಅಧ್ಯಕ್ಷರಾಗಿ ಡಿ.ಎನ್. ಕೃಷ್ಣಾರೆಡ್ಡಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೋಡಿರಂಗಪ್ಪ ಆಯ್ಕೆ ಮಾಡಿದರು.
ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಲು ಡಿ.ಎನ್.ಕೃಷ್ಣಾರೆಡ್ಡಿ, ಬಿ.ಆರ್.ಕೃಷ್ಣ, ಚಿನ್ನಕೈವಾರಮಯ್ಯ, ಎ.ಜಿ.ಸುಧಾಕರ್ ಅವರು ತೀವ್ರ ಪೈಪೋಟಿ ನಡೆಸಿದ್ದು ಬಿ.ಆರ್.ಕೃಷ್ಣ, ಎ.ಜಿ.ಸುಧಾಕರ್ ಅವರು ಹಿಂದಿನ ಅವಧಿಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನೂತನ ಸದಸ್ಯರಿಗೆ ಅವಕಾಶ ಕಲ್ಪಿಸಲು ಪ್ರಬಲ ಆಕಾಂಕ್ಷಿಯಾದ ಡಿ.ಎನ್.ಕೃಷ್ಣಾರೆಡ್ಡಿ ಅವರನ್ನು ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಚಿನ್ನಕೈವಾರಮಯ್ಯ ಅವರನ್ನು ಜಿಲ್ಲಾ ಪದಾಧಿಕಾರಿಯಾಗಿ ಆಯ್ಕೆ ಮಾಡಲಾಗುವುದು ಎಂದು ಕೋಡಿರಂಗಪ್ಪ ತಿಳಿಸಿದರು.
ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, “ಅಧ್ಯಕ್ಷ ಸ್ಥಾನದಿಂದ ಕಳೆದ ಮೂರು ಅವಧಿಗಳಲ್ಲಿ ಹಿಂದೆ ಸರಿದಿದ್ದೇನೆ. ನನ್ನ ಮೇಲೆ ವಿಶ್ವಾಸ ಇರಿಸಿ, ಅಧ್ಯಕ್ಷರನ್ನಾಗಿ ಮಾಡಿದ್ದು, ತಾಲ್ಲೂಕಿನಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಮಾಡಲು ಎಲ್ಲರ ಸಹಕಾರ ಅಗತ್ಯ” ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಅಧ್ಯಕ್ಷ ಸೊಣ್ಣೇಗೌಡ, ಅಮೃತ್ ಕುಮಾರ್, ಮಾಜಿ ಅಧ್ಯಕ್ಷರಾದ ಎ.ಜಿ.ಸುಧಾಕರ್, ಬಿ.ಆರ್.ಕೃಷ್ಣ, ಮುನಿರಾಮಯ್ಯ, ಚಿನ್ನಕೈವಾರಮಯ್ಯ, ರಾಮಚಂದ್ರರೆಡ್ಡಿ, ಆರ್.ಹನುಮಂತರಡ್ಡಿ, ಕೆ.ಎಂ.ನಾಗರಾಜ್, ಮಣಿಕಂಠ, ಎಸ್.ಎಸ್. ಶ್ರೀನಿವಾಸ್, ಬಿ.ಎಸ್.ಸುರೇಶ್, ಎಂ.ಸಿ. ನಂಜುಂಡಪ್ಪ, ಆರ್.ಸುಧಾಕರ್, ಪಿ.ವೆಂಕಟರವಣಪ್ಪ, ಪಿ.ವೆಂಕಟ ರಾಯಪ್ಪ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur