Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ (Deputy Commissioner Office) ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಸರ್ವಜ್ಞ ಜಯಂತಿ (Sarvajna Jayanti) ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ “ಸಂತ ಕವಿ ಸರ್ವಜ್ಞ ರಾಷ್ಟ್ರಕಂಡ ಶ್ರೇಷ್ಟ ತತ್ವಜ್ಞಾನಿ, ತಮ್ಮ ತ್ರಿಪದಿಗಳ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ‘ಅನ್ನಕ್ಕೆ ಮಿಗಿಲಾದುದ್ದು ಯಾವುದು ಇಲ್ಲ, ಅನ್ನವೇ ಲೋಕಕ್ಕೆ ಪ್ರಾಣ ಸರ್ವಜ್ಞ’ ಎಂದು ಅನ್ನದ ಮಹತ್ವ ಸಾರಿದ ಮೊದಲಿಗರು. ಪ್ರತಿಯೊಬ್ಬರು ಅವರ ವಚನಗಳು ಹಾಗೂ ತತ್ವಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು” ಎಂದು ಹೇಳಿದರು.
ಜಿಲ್ಲಾ ಕುಂಬಾರ ಸಮುದಾಯದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಚಂದ್ರಣ್ಣ, ಮುಖಂಡರಾದ ಪ್ರೇಮಲೀಲಾ, ವಿ.ಸುಶೀಲಾ, ನಾಗಮಣಿ, ಸುಬ್ಬಲಕ್ಷ್ಮಿ, ಮಂಜುನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur