Saturday, March 25, 2023
HomeGauribidanurವಿಶ್ವ ಸಾಮಾಜಿಕ ನ್ಯಾಯದಿನಾಚರಣೆ

ವಿಶ್ವ ಸಾಮಾಜಿಕ ನ್ಯಾಯದಿನಾಚರಣೆ

- Advertisement -
- Advertisement -
- Advertisement -
- Advertisement -

Gauribidanur : ಗೌರಿಬಿದನೂರು ನಗರದ ಮಿನಿವಿಧಾನಸೌಧದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ‘ವಿಶ್ವ ಸಾಮಾಜಿಕ ನ್ಯಾಯದಿನ’ (World Social Justice Day) ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ.ಸಚಿನ್ “ಸಂವಿಧಾನದ ಆಶಯದಂತೆ ಎಲ್ಲರಿಗೂ ಗುಣಮಟ್ಟದ ಕನಿಷ್ಠ ಶಿಕ್ಷಣ ಸಿಗಬೇಕು. ಸಮಾಜದಲ್ಲಿ ವಯೋವೃದ್ಧರಿಗೆ, ಅಂಗವಿಕಲರಿಗೆ, ದುರ್ಬಲರಿಗೆ ಸಾಮಾಜಿಕ ನ್ಯಾಯ ಸಿಕ್ಕಾಗ ಮಾತ್ರ ಸಮಾನತೆಯ ಜತೆಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ” ಎಂದು ಹೇಳಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಂಜುನಾಥಾಚಾರಿ, ಸರ್ಕಾರಿ ಅಭಿಯೋಜಕ ಆದಿನಾರಾಯಣಸ್ವಾಮಿ, ವಕೀಲ ಕೆ.ಲಕ್ಷ್ಮಿನಾರಾಯಣ್, ಮುರಳೀಧರ್, ಪಿಎಸ್‌ಐ ಚಂದ್ರಕಲಾ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಸರೋಜಮ್ಮ, ವಕೀಲ ಸಂಘದ ಅಧ್ಯಕ್ಷ ಡಿ.ರಾಮದಾಸ್, ಕಾರ್ಯದರ್ಶಿ ದಯಾನಂದ್, ಆನಂದ್ ನಾಗರಾಜ್ ಮುಂತಾದವರು ಪಾಲ್ಗೊಂಡಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!