Chikkaballpaur : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ (Prof. Kodi Rangappa) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ (KaSaPa) ಅಧ್ಯಕ್ಷರಾಗಿ ಯಲುವಹಳ್ಳಿ ಸೊಣ್ಣೇಗೌಡ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರೊ.ಕೋಡಿ ರಂಗಪ್ಪ ತಾಲ್ಲೂಕು ಘಟಕವು ಜಿಲ್ಲಾ ಕೇಂದ್ರದಲ್ಲಿರುವುದರಿಂದ ಅತ್ಯಂತ ಯಶಸ್ವಿಯಾಗಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕಾಗಿರುವುದರಿಂದ್ದ ಕನ್ನಡಪರ ಅಭಿಮಾನವುಳ್ಳ ಯಲುವಳ್ಳಿ ಸೊಣ್ಣೇಗೌಡ ಅವರನ್ನು ತಾಲ್ಲೂಕು ಘಟಕದ ಅಧ್ಯಕ್ಷ ಗಾದಿಗೆ ನಿಯೋಜಿಸಲಾಗಿದೆ” ಎಂದು ಹೇಳಿದರು.
ನನ್ನ ಈ ಜವಾಬ್ದಾರಿಯನ್ನು ಸಾಹಿತ್ಯ ಪರಿಷತ್ತಿನ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯಚಟುವಟಿಕೆ ನಿರ್ವಹಿಸಿಕೊಂಡು ಪ್ರಾಮಾಣಿಕ, ದಕ್ಷತೆಯಿಂದ ನಿರ್ವಹಿಸುವೆ.”ಎಂದು ಯಲುವಳ್ಳಿ ಸೊಣ್ಣೇಗೌಡ ತಿಳಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೈ.ಎಲ್.ಹನುಮಂತರಾವ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ್, ಬಿಜಿಎಸ್ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಪಿ.ಸಿ.ಲಕ್ಷ್ಮಿನಾರಾಯಣ್, ಜಿಲ್ಲಾ ಕಸಾಪ ಮಾಜಿ ಕಾರ್ಯದರ್ಶಿ ಅಮೃತ್‍ಕುಮಾರ್, ಸಹ ಪ್ರಾಧ್ಯಾಪಕ ಶಂಕರ್, ಬೈಯಣ್ಣ, ಸು.ದಾ.ವೆಂಕಟೇಶ್, ಗ.ನಾ.ಅಶ್ವತ್ಥ್, ನಾಗಭೂಷಣ್‍ರೆಡ್ಡಿ, ಕರವೇ ಯುವಸೇನೆ ಜಿಲ್ಲಾ ಅಧ್ಯಕ್ಷ ರಾಮೇಗೌಡ, ಶ್ರೀರಾಮಯ್ಯ, ಟಿ.ವಿ.ಚಂದ್ರಶೇಖರ್, ಕೆ.ಎಂ.ರೆಡ್ಡಪ್ಪ, ಚಲಪತಿಗೌಡ, ಸರಸಮ್ಮ, ಸುಶೀಲಾ ಮಂಜುನಾಥ್, ಪ್ರೇಮಲೀಲಾ ವೆಂಕಟೇಶ್, ಲತಾ ರಾಮಮೋಹನ್ ಮತಿತ್ತರರು ಸಭೆಯಲ್ಲಿ ಭಾಗವಹಿಸಿದ್ದರು .
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur