Monday, September 16, 2024
HomeNewsಕಳ್ಳರಿಂದ ₹ 22 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶ

ಕಳ್ಳರಿಂದ ₹ 22 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶ

- Advertisement -
- Advertisement -
- Advertisement -
- Advertisement -

hintamani: ಕಳ್ಳತನ ಆರೋಪದ ಮೇಲೆ ಬಂಧಿಸಲಾದ ಮೂವರು ಆರೋಪಿಗಳಿಂದ ಚಿಂತಾಮಣಿ ನಗರಠಾಣೆ ಪೊಲೀಸರು 300 ಗ್ರಾಂ ಬೆಳ್ಳಿ, 440 ಗ್ರಾಂ ತೂಕದ ಚಿನ್ನದ ಆಭರಣ ಸೇರಿ ಒಟ್ಟು ₹ 22 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಚಿಂತಾಮಣಿಯ ಬಾಬಾಜಾನ್ ಮತ್ತು ಬಂಗಾರಪೇಟೆ ತಾಲ್ಲೂಕಿನ ಶಿವಲಿಂಗ ಗ್ರಾಮದ ನಿವಾಸಿಗಳಾದ ಚಂದ್ರಪ್ಪ, ಗಂಗೋತ್ರಿ ಎಂದು ಗುರುತಿಸಲಾಗಿದೆ.

ಚಂದ್ರಪ್ಪ ತನ್ನ ಸಹಚರರಾದ ಗಂಗೋತ್ರಿ, ಬಾಬಜಾನ್ ಮತ್ತು ಮುನಿರಾಜು ಜತೆಗೂಡಿ 2-3 ತಿಂಗಳಿಂದ ರಾತ್ರಿ ವೇಳೆಯಲ್ಲಿ ಕಬ್ಬಿಣದ ರಾಡ್ ಗಳನ್ನು ಬಳಸಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಬೀಗ ಮುರಿದು ಕಳವು ಮಾಡುತ್ತಿದ್ದರು. ಚಿಂತಾಮಣಿ ನಗರದಲ್ಲಿ 10 ಕಡೆ, ಗ್ರಾಮಾಂತರ ವ್ಯಾಪ್ತಿಯಲ್ಲಿ 4 ಕಡೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 5 ಕಡೆ, ಬಂಗಾರಪೇಟೆ ತಾಲ್ಲೂಕಿನಲ್ಲಿ 2 ಕಡೆ ಕಳವು ಮಾಡಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್‌ ತಿಳಿಸಿದರು.

ಆರೋಪಿಗಳನ್ನು ಪತ್ತೆ ಹಚ್ಚಲು ಡಿವೈಎಸ್‌ಪಿ ವಿ.ಲಕ್ಷ್ಮಯ್ಯ, ನಗರಠಾಣೆ ನಿರೀಕ್ಷಕ ನರೇಶ ನಾಯ್ಕ್‌, ಪಿಎಸ್‌ಐ ನಾರಾಯಣಸ್ವಾಮಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಮಿಥುನ್‌ಕುಮಾರ್‌ ತಿಳಿಸಿದರು.

- Advertisement -
RELATED ARTICLES
- Advertisment -

Most Popular

error: Content is protected !!