Chintamani : ಚಿಂತಾಮಣಿ ತಾಲ್ಲೂಕಿನ ಬೆಂಗಳೂರು–ಮದನಪಲ್ಲಿ ರಸ್ತೆಯ ಐಮರೆಡ್ಡಿಹಳ್ಳಿ (Aimareddihally) ಬಳಿ ಕಾರು ಮೋರಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ (car accident).
ಬೆಂಗಳೂರು ಯಲಹಂಕ ತಾಲ್ಲೂಕಿನ ಚಿಕ್ಕಜಾಲ ಸಮೀಪದ ಮಾರನಾಯಕನಹಳ್ಳಿ ಮತ್ತು ಮೀನುಕುಂಟೆ ಗ್ರಾಮದ ಲಕ್ಷ್ಮೀಕಾಂತ್, ಅನಂತಕುಮಾರ್, ವೆಂಕಟೇಶ್, ಅಂಬರೀಶ್ ಹಾಗೂ ರಾಮಚಂದ್ರ ಎಂಬವರು ಆಂಧ್ರಪ್ರದೇಶದ ಬಾಯಿಕೊಂಡ ಗಂಗಮ್ಮದೇವಿ ದರ್ಶನದ ನಂತರ ವಾಪಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ.
ಗಾಯಾಳುಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
