Monday, September 26, 2022
HomeChintamaniವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

- Advertisement -
- Advertisement -
- Advertisement -
- Advertisement -

Chintamani : ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿಯ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪುರ ಗ್ರಾಮದಲ್ಲಿ ಮಂಗಳವಾರ ಕೊಳವೆ ಬಾವಿ (Borewell) ಪಂಪು ಮತ್ತು ಮೋಟಾರನ್ನು ಮೇಲೆತ್ತುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ (Electric Shock) ನವೀನ್ (25) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು (Death), ಇಬ್ಬರು ಗಾಯಗೊಂಡಿದ್ದಾರೆ.

ದೊಡ್ಡಪುರ ಗ್ರಾಮದ ರೈತ ಮಂಜುನಾಥ್ ಎಂಬುವವರ ತೋಟದ ಕೊಳವೆ ಬಾವಿಯಲ್ಲಿ ಟ್ರ್ಯಾಕ್ಟರ್ ಮೂಲಕ ಪಂಪು ಮತ್ತು ಮೋಟರನ್ನು ಹೊರತೆಗೆಯುತ್ತಿದ್ದಾಗ ಮೋಟಾರನ್ನು ಹೊರತೆಗೆಯುವ ಕಬ್ಬಿಣದ ರಾಡ್ ಮೇಲಕ್ಕೆ ಎತ್ತುವ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದರು.

ಗಾಯಗೊಂಡಿರುವ ಕೇಶವ ಹಾಗೂ ವೆಂಕಟರಾಮರೆಡ್ಡಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

error: Content is protected !!