Home News Chintamani ಚಿಂತಾಮಣಿ ನಗರಸಭೆಯ ಬಜೆಟ್

ಚಿಂತಾಮಣಿ ನಗರಸಭೆಯ ಬಜೆಟ್

0
Chintamani CMC Budget 2024

Chintamani : ಚಿಂತಾಮಣಿ ನಗರಸಭೆಯ (CMC) 2024-25ನೇ ಸಾಲಿಗೆ ₹78 ಲಕ್ಷ ಉಳಿತಾಯ ಬಜೆಟನ್ನು (Budget) ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಂಗಳವಾರ ಮಂಡಿಸಿದರು. ಬಜೆಟ್‌ನಲ್ಲಿ ಕುಡಿಯುವ ನೀರು, ಬೀದಿದೀಪ, ರಸ್ತೆ ಹಾಗೂ ಚರಂಡಿ ನಿರ್ವಹಣೆ, ಉದ್ಯಾನ ಹಸಿರೀಕರಣ, ಸಾರ್ವಜನಿಕ ಸೌಲಭ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದವರ ಅಭಿವೃದ್ಧಿಗೂ ಅನುದಾನ ಮೀಸಲಿಡಲಾಗಿದೆ.

ನಗರಸಭೆಯ ಸಿಬ್ಬಂದಿಯ ವೇತನ ಅನುದಾನ ₹3.75ಕೋಟಿ, ಅಂಗಡಿ ಮಳಿಗೆಗಳಿಂದ ಬಾಡಿಗೆ 2.10 ಕೋಟಿ, ನಗರಸಭೆ ನಿಧಿ ಮಳಿಗೆಗಳಿಂದ ₹65 ಲಕ್ಷ, ಹೊಸ ಬಡಾವಣೆ ಅಭಿವೃದ್ಧಿ ಶುಲ್ಕ ₹50 ಲಕ್ಷ, ಸಾರ್ವಜನಿಕ ಶೌಚಾಲಯ ಮತ್ತು ಪೆಟ್ರೋಲ್ ಬಂಕ್ ಬಾಡಿಗೆ ₹1.50 ಕೋಟಿ ನಿರೀಕ್ಷಿಸಲಾಗಿದ್ದು ನೀರಿನ ತೆರಿಗೆ ₹2.10 ಕೋಟಿ, ಒಳಚರಂಡಿ ಸಂಪರ್ಕ ಮತ್ತು ಸೇವಾ ಶುಲ್ಕ ₹1.5 ಕೋಟಿ, ನಲ್ಮ್ ಯೋಜನೆಯ ಅನುದಾನ ₹2.75ಕೋಟಿ, ನಗರಸಭೆಗೆ ಬ್ಯಾಂಕ್ ಬಡ್ಡಿಯಿಂದ ₹50 ಲಕ್ಷ, ಆಸ್ತಿ ತೆರಿಗೆ ₹10 ಕೋಟಿ, ಆಸ್ತಿ ತೆರಿಗೆ ದಂಡ ₹75 ಲಕ್ಷ, ಕಸ ಸಂಗ್ರಹಣೆ ಶುಲ್ಕ ₹40 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ. 2024-25ನೇ ಸಾಲಿನಲ್ಲಿ ವಿವಿಧ ಉದ್ದೇಶಗಳಿಗಾಗಿ ಸರ್ಕಾರದಿಂದ ₹53.81ಕೋಟಿ ಅನುದಾನ ನಿರೀಕ್ಷಿಸಲಾಗಿದೆ. ಸಚಿವ ಡಾ.ಎಂ.ಸಿ.ಸುಧಾಕರ್ ಯುಜಿಡಿ ಅಭಿವೃದ್ಧಿಗಾಗಿ ಜಿಲ್ಲೆಗೆ ₹100 ಕೋಟಿ ಮಂಜೂರು ಮಾಡಿಸಿದ್ದು ಅದರಲ್ಲಿ ಚಿಂತಾಮಣಿಗೆ ₹40 ಕೋಟಿ ದೊರೆಯಲಿದೆ ಎಂದು ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.

ಈ ಸಂಧರ್ಭದಲ್ಲಿ ನಗರಸಭೆಯ ಸದಸ್ಯರು ಮತ್ತು ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version