Chintamani : ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ (Chinnasandra) ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ (Dr. M. C. Sudhakar) ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕರು “ಹಿಂದಿನಿಂದಲೂ ನಮ್ಮ ಕುಟುಂಬ Congress ನೊಂದಿಗೆ ಒಡನಾಟ ಹೊಂದಿದ್ದು ಒಬ್ಬ ವ್ಯಕ್ತಿ ನೀಡಿದ ತೊಂದರೆಯಿಂದ ಪಕ್ಷದಿಂದ ಹೊರಗೆ ಉಳಿಯಬೇಕಾಯಿತು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದಾಗ ನಾಯಕರು ಸರಿಪಡಿಸಬೇಕಾಗಿತ್ತು. ಆದರೆ ಪಕ್ಷದ ಮುಖಂಡರು ಈ ಬಗ್ಗೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ಎಂಬ ನೋವು ಕಾಡುತ್ತಿದೆ. ಈಗಾಗಲೇ 10 ವರ್ಷದ ರಾಜಕೀಯ ಜೀವನವನ್ನು ಕಳೆದುಕೊಳ್ಳಲಾಗಿದೆ. ಹಿಂದೆ ನಡೆದ ಗೊಂದಲ, ಹಸ್ತಕ್ಷೇಪ ಮರುಕಳಿಸಬಾರದೆಂದು ಎಲ್ಲ ರೀತಿಯಲ್ಲಿ ಜಾಗ್ರತೆ ವಹಿಸಲಾಗುತ್ತಿದೆ. ಕಾಂಗ್ರೆಸ್ ಸೇರ್ಪಡೆ ಕುರಿತು ಆತುರಪಡದೇ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ನಾನು ಇಬ್ಬರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ಹಿರಿಯ ಕಾಂಗ್ರೆಸ್ ನಾಯಕರಿಂದ ಮುಂದೆ ಯಾವ ತೊಂದರೆ ಆಗದಂತೆ ಭರವಸೆ ನೀಡಬೇಕಾಗಿದೆ ಎಂದು ರಾಜ್ಯ ನಾಯಕರಿಗೆ ತಿಳಿಸಲಾಗಿದ್ದು ದೆಹಲಿ ನಾಯಕರೊಂದಿಗೆ ಭೇಟಿಯ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ (D. K. Shivakumar) ಮತ್ತು ಸಿದ್ದರಾಮಯ್ಯ (Siddaramaiah) ಬರವಸೆನೀಡಿದ್ದಾರೆ” ಎಂದು ಹೇಳಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur