Sunday, June 23, 2024
HomeChintamaniಕೈವಾರದಲ್ಲಿ ಗರತಿಯರ ಹಬ್ಬ

ಕೈವಾರದಲ್ಲಿ ಗರತಿಯರ ಹಬ್ಬ

- Advertisement -
- Advertisement -
- Advertisement -
- Advertisement -

Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ (Kaiwara) ಕರ್ನಾಟಕ ಜಾನಪದ ಪರಿಷತ್ತಿನ (Karnataka Janapada Parishat) ತಾಲ್ಲೂಕು ಘಟಕ, ಮೌರ್ಯ ಶ್ರೀರಾಮಗುಪ್ತ ಟ್ರಸ್ಟ್, ಶ್ರೀ ಯೋಗಿನಾರೇಯಣ ಮಠದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ (International Women’s Day) ಅಂಗವಾಗಿ ಮಂಗಳವಾರ ‘ಗರತಿಯರ ಹಬ್ಬ’ (Garatiyara Habba) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ “ಪ್ರತಿಯೊಬ್ಬ ಮಹಿಳೆಯಲ್ಲೂ ಒಂದೊಂದು ಪ್ರತಿಭೆ ಇರುತ್ತೆ. ಆದರೆ ಅದನ್ನು ಹೊರಗಡೆ ಅನಾವರಣ ಮಾಡಲು ಸೂಕ್ತ ಅವಕಾಶ, ವೇದಿಕೆ ದೊರೆಯುವುದಿಲ್ಲ. ಅಂತಹ ಪ್ರತಿಭೆಗಳಿಗೆ ಕರ್ನಾಟಕ ಜಾನಪದ ಪರಿಷತ್ತು ಅವಕಾಶ ಮಾಡಿಕೊಡುತ್ತಿರುವುದು ಶ್ಲಾಘನೀಯ. ಜಾಗತೀಕರಣ, ಆಧುನೀಕರಣದ ಜಂಜಾಟದಲ್ಲಿ ಸಂಪ್ರದಾಯದ ಮೂಲ ಹಾಗೂ ಬೇರುಗಳನ್ನು ಮರೆಯುತ್ತಿರುವುದು ವಿಷಾದನೀಯ. ಜನಪದಲೋಕದ ಪಾರಂಪರಿಕ, ಸಾಂಪ್ರದಾಯಿಕ ಹಬ್ಬ ಆಚರಣೆ, ಹಾಡು, ಕುಣಿತ, ಕಲೆ ಸಂರಕ್ಷಿಸಿ ಬೆಳಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಗರತಿಯರ ಹಬ್ಬದಲ್ಲಿ ಜಾನಪದ ಲೋಕವನ್ನೇ ಸೃಷ್ಟಿ ಮಾಡಲಾಗಿದೆ. ಮಹಿಳೆಯರು ದುರ್ಬಲ, ಸಂಕೋಚದ ಯೋಚನೆಗಳನ್ನು ಮಾಡದೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಾವಾಗಲೂ ಪ್ರಥಮ ಸ್ಥಾನಗಳಲ್ಲಿರಬೇಕು ಎಂಬ ಸವಾಲನ್ನು ಹೊಂದಿರಬೇಕು. ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸದೆ ಸಮಾನ ಅವಕಾಶಗನ್ನು ಮಾಡಿಕೊಟ್ಟು ಸ್ವಂತ ಶಕ್ತಿಯಿಂದ ಸ್ವಾವಲಂಬಿಗಳಾಗಿ ಬೆಳೆಯುವಂತೆ ಪೋಷಕರು ಮಾಡಬೇಕು” ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಉಷಾ ಶ್ರೀನಿವಾಸಬಾಬು, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾಲಕ್ಷ್ಮೀನಾರಾಯಣ್, ತಹಶೀಲ್ದಾರ್ ಹನುಮಂತರಾಯಪ್ಪ, ಕಲಾವಿದ ಮುನಿರೆಡ್ಡಿ, ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್, ಕೈವಾರ ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್, ಜಾನಪದ ಪರಿಷತ್ತಿನ ಗೌರವ ಅಧ್ಯಕ್ಷ ವೈ.ಎಲ್.ಹನುಮಂತರಾವ್, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಶೂಭಾ, ಮೌರ್ಯ ಟ್ರಸ್ಟ್ನ ಅಧ್ಯಕ್ಷೆ ಶ್ವೇತಾಶ್ರೀರಾಮಗುಪ್ತ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ದೇವತಾದೇವರಾಜ್ ಮುಂತಾದವರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!