Chintamani : ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿ ಗುಟ್ಟಹಳ್ಳಿ ಗ್ರಾಮದ ಕೋಳಾಲಮ್ಮ ದೇವಾಲಯ (Kolalamma Temple) ದ ಧರ್ಮದರ್ಶಿ ಶ್ರೀಧರ್ ಅಮ್ಮ (31) ಮತ್ತು ಸಹಾಯಕ ಅರ್ಚಕ ಲಕ್ಷ್ಮೀಪತಿ (25) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಶುಕ್ರವಾರ ಇಬ್ಬರ ಶವಗಳು ದೇವಾಲಯದ ಕೊಠಡಿಯಲ್ಲಿ ಪತ್ತೆಯಾಗಿವೆ.
ಮಾತೃ ಸ್ವರೂಪಿಣಿ ಶ್ರೀಧರ್ ಅಮ್ಮ ( ಶ್ರೀಧರ್). ಮೂಲತ: ಕೈವಾರ ಹೋಬಳಿ ಗುಟ್ಟಹಳ್ಳಿ ಗ್ರಾಮದವರಾಗಿದ್ದು, ಸಹಾಯಕ ಅರ್ಚಕ ಲಕ್ಷ್ಮೀಪತಿ ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದವರು.
ಶ್ರೀಧರ್ ಅಮ್ಮ ಅವರು ಗುಟ್ಟಹಳ್ಳಿ ಗ್ರಾಮದಲ್ಲಿ ಗುಡಿಯನ್ನು ಸ್ಥಾಪಿಸಿ ಪ್ರತಿವರ್ಷ ಜಾತ್ರೆ, ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದ್ದರು ಹಾಗೂ ಹಲವು ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು ಮತ್ತು ಸಹಾಯಕ ಅರ್ಚಕ ಲಕ್ಷ್ಮೀಪತಿ ಅವರು ದೇವಾಲಯದ ಅರ್ಚಕನಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur