Chintamani : ಚಿಂತಾಮಣಿಯ ಕೀರ್ತಿ ನಗರದ ಕೊಳಚೆಪ್ರದೇಶದ 98 ಫಲಾನುಭವಿಗಳು ಸಲ್ಲಿಸಬೇಕಾಗಿದ್ದ ₹1.57 ಲಕ್ಷ ವನ್ನು ಚೆಕ್ ರೂಪದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ (Karnataka Slum Development Board) (KSDB) ಅಧಿಕಾರಿಗೆ ಬುಧವಾರ ನಗರಸಭೆಯಲ್ಲಿ ನಗರಸಭೆ (CMC) ಅಧ್ಯಕ್ಷೆ ರೇಖಾ ಉಮೇಶ್ ಹಸ್ತಾಂತರಿಸಿದರು.
ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ರೇಖಾ ಉಮೇಶ್ “ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕೆಂದು ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಸತತವಾಗಿ ಪ್ರಯತ್ನ ನಡೆಸಿ ಕೊಳಚೆ ನಿರ್ಮೂಲನಾ ಮಂಡಳಿಗೆ ಅನೇಕ ಬಾರಿ ಪತ್ರ ಬರೆದು ಅಗತ್ಯ ದಾಖಲೆ ಒದಗಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪರಿಶಿಷ್ಟಜಾತಿ ಮತ್ತು ಪಂಗಡದವರು ಒಂದು ಸಾವಿರ ಹಾಗೂ ಸಾಮಾನ್ಯ ವರ್ಗದವರು ಎರಡು ಸಾವಿರ ರೂಪಾಯಿಯನ್ನು ಕೊಳಚೆ ಪ್ರದೇಶಗಳ ಫಲಾನುಭವಿಗಳು ಹಕ್ಕುಪತ್ರ ಪಡೆಯಲು ಪಾವತಿಸಬೇಕಿದ್ದು ಸರ್ಕಾರ ನೀಡುತ್ತಿರುವ ಹಕ್ಕು ಪತ್ರಗಳಿಗೆ ಸರ್ಕಾರದಿಂದಲೇ ಹಣದ ಸಹಾಯ ಮಾಡಬೇಕು ಎಂದು ಕೌನ್ಸಿಲ್‌ನಲ್ಲಿ ಚರ್ಚಿಸಿ 2022-23 ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಕೊಳಚೆ ಪ್ರದೇಶಗಳಿಗಾಗಿ ಮೀಸಲಿಟ್ಟಿರುವ ಹಣವನ್ನು ನೀಡಲಾಗುತ್ತಿದೆ” ಎಂದು ತಿಳಿಸಿದರು.
ನಗರಸಭೆಯ ಲೆಕ್ಕಪರಿಶೋಧನಾಧಿಕಾರಿ ನಾಗೇಂದ್ರ, ವ್ಯವಸ್ಥಾಪಕ ನಸೀರ್ ಅಹ್ಮದ್, ನಗರಸಭೆ ಸದಸ್ಯರಾದ ಮಹ್ಮದ್ ಶಫೀಕ್, ಜಗದೀಶರೆಡ್ಡಿ, ಹರೀಶ್, ರಾಜಾಚಾರಿ ಮತ್ತಿತರರು ಉಪಸ್ಥಿತರಿದ್ದರು.