Chintamani : ಡಿಸಿಬಿ ಬ್ಯಾಂಕ್, ಇಂಡಿಯಾ ಕೇರ್ಸ್, ವಿಮಾಸ್ ಮತ್ತಿತರ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚಿಂತಾಮಣಿ ನಗರದ ಮಾಳಪ್ಪಲ್ಲಿ ಕೆರೆ ಅಭಿವೃದ್ಧಿಯ (Lake Development) ₹46 ಲಕ್ಷ ವೆಚ್ಚದ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ “ಚಿಂತಾಮಣಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಕನಂಪಲ್ಲಿ ಕೆರೆ, ನೆಕ್ಕುಂದಿ ಕೆರೆ ಹಾಗೂ ಭಕ್ತರಹಳ್ಳಿ ಅರಸೀಕೆರೆಯ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ತಲಾ₹ 35 ಕೋಟಿಯಂತೆ ₹105 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ಕನಂಪಲ್ಲಿ ಕೆರೆಯ ನೀರಿನ ಸಾಮರ್ಥ್ಯವನ್ನು 3 ಪಟ್ಟು ಹೆಚ್ಚಿಸಲು ₹35 ಕೋಟಿ ಮಂಜೂರಾಗಿದೆ. ಅಂತರ್ಜಲ ವೃದ್ಧಿ ಸಮಾಜಕ್ಕೆ ನೀಡುವ ಕೊಡುಗೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಕೆರೆಗಳ ಬಗ್ಗೆ ಹೆಚ್ಚಿನ ಜ್ಞಾನವಿದ್ದರೂ, ಅಷ್ಟೇ ನಿರ್ಲಕ್ಷ್ಯತೆಯೂ ಇದೆ. ಕೆ.ಸಿ ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ ತಾಲ್ಲೂಕಿನ 5 ಕೆರೆಗಳನ್ನು ಸೇರಿಸಲಾಗಿತ್ತು. ಎರಡನೇ ಹಂತದಲ್ಲಿ 55 ಕೆರೆಗಳನ್ನು ಸೇರಿಸಲಾಗಿದೆ. ಕೆ.ಸಿ.ವ್ಯಾಲಿಯಿಂದ 400 ಎಂಎಲ್‌ಡಿ ನೀರು ಹರಿಸುವ ಯೋಜನೆಯಾಗಿದ್ದು, ಇನ್ನೂ 125 ಎಂಎಲ್‌ಡಿ ಹೆಚ್ಚಿಸಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಜಿ.ಎನ್.ಚಲಪತಿ, ಡಿಸಿಬಿ ಬ್ಯಾಂಕ್‌ನ ರಮೇಶ ಬಾಬು, ವಿಷ್ಣು, ವೀಣಾ, ರಾಜೇಶ್, ರಾಮಪ್ರಸಾದ್, ಮಂಜುನಾಥ್, ಮುನಿಶಾಮಿರೆಡ್ಡಿ, ನಾಗಿರೆಡ್ಡಿ, ಗೌತಮ್, ಜಯರಾಮರೆಡ್ಡಿ ಭಾಗವಹಿಸಿದ್ದರು.