Chintamani : ಚಿಂತಾಮಣಿ ನಗರದ ಹೊರವಲಯದ ಮುರುಗಮಲ್ಲ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಭಾನುವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು (LPG cylinder blast) ತಾಯಿ ಸೇರಿದಂತೆ ಮೂವರು ಮಕ್ಕಳು ಗಾಯಗೊಂಡಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಲಕ್ಷ್ಮೀದೇವಮ್ಮ (33) ಮತ್ತು ಅವರ ಪುತ್ರ ಹರ್ಷವರ್ಧನ್ (12) ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ, ಅವರ ಸಹೋದರನ ಮಕ್ಕಳು ಸಂಜಯ್ (12) ಮತ್ತು ಹರಿಪ್ರಿಯಾ (10) ಲಘು ಗಾಯಗಳೊಂದಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಫೋಟದ ತೀವ್ರ ಶಬ್ದ ಕೇಳಿ ಪಕ್ಕದವರು ಸ್ಥಳಕ್ಕೆ ಓಡಿಬಂದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಮುರಿದುಬಿದ್ದು, ಒಳಗಿನ ಸಾಮಾನುಗಳು ಸುಟ್ಟು ಹೋಗಿವೆ. ಅನಿಲ ಸೋರಿಕೆಯಿಂದಲೇ ಸ್ಫೋಟ ಸಂಭವಿಸಿರಬಹುದೆಂದು ಸ್ಥಳೀಯರು ಅಂದಾಜು ಹಾಕಿದ್ದಾರೆ.
ಘಟನೆಯ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.