Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ (Murugamalla) ಗ್ರಾಮದ ದರ್ಗಾದಲ್ಲಿ ಭಾನುವಾರ ಅಪಹರಣವಾಗಿದ್ದ (Child Kidnap) ಎರಡು ವರ್ಷದ ಗಂಡು ಮಗು ಜಾವಿದ್ ಮಂಗಳವಾರ ಹುಬ್ಬಳ್ಳಿಯಲ್ಲಿ (Hubli) ಪತ್ತೆಯಾಗಿದೆ.
ಬೆಂಗಳೂರಿನ ಪಾದರಾಯನ ಪುರದ ಜಬೀವುಲ್ಲಾ, ಅವರ ಮಾವ ದಸ್ತು, ಅತ್ತೆ ಆಯಿಷಾ ಹಾಗೂ ಸಂಬಂಧಿಕರು ಎರಡು ದಿನಗಳ ಹಿಂದೆ ದರ್ಗಾಗೆ ಭೇಟಿ ನೀಡಿದ್ದರು. ಆ ವೇಳೆ ಮಗು ಕಾಣೆಯಾಗಿತ್ತು. ದರ್ಗಾದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರ ಮಧ್ಯಾಹ್ನ ಮಗು ಸಿಕ್ಕಿರುವ ಮಾಹಿತಿಯನ್ನು ಅಲ್ಲಿಯ ಸಮಾಜ ಕಲ್ಯಾಣ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ಮಾಹಿತಿ ದೊರೆಯುತ್ತಲೇ ಪೊಲೀಸರ ತಂಡ ಹಾಗೂ ಮಗುವಿನ ಪೋಷಕರು ಹುಬ್ಬಳ್ಳಿಗೆ ದೌಡಾಯಿಸಿದ್ದಾರೆ. ಮಗು ಎಲ್ಲಿ ಪತ್ತೆಯಾಗಿದೆ. ಮಗುವನ್ನು ಎತ್ತಿಕೊಂಡು ಹೋದ ಅಪರಿಚಿತ ವ್ಯಕ್ತಿ ಯಾರು ಮತ್ತು ಹುಬ್ಬಳ್ಳಿಯಲ್ಲಿ ಏಕೆ ಬಿಟ್ಟು ಹೋದ ಎಂಬ ಪ್ರಶ್ನೆಗಳಿಗೆ ಇನ್ನೂ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಹುಬ್ಬಳ್ಳಿಗೆ ತೆರಳಿರುವ ತಂಡ ಬಂದ ಬಳಿಕ ಎಲ್ಲಾ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur