Home News Chintamani ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ತರಬೇತಿ

ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ತರಬೇತಿ

0
Chintamani Organic Farming Workshop for Women

Chintamani : ಚಿಂತಾಮಣಿ ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ಸಂಸ್ಥೆ ಹಾಗೂ ಸಂಜೀವಿನಿ ಸಂಸ್ಥೆ ಸಹಯೋಗದಲ್ಲಿ ಐದು ದಿನಗಳ ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ತರಬೇತಿ (Organic Farming Workshop for Women) ನಡೆಸಲಾಯಿತು.

ಮುಖ್ಯ ತರಬೆತುದಾರ ಮಣ್ಣು ವಿಜ್ಞಾನಿ ಕೆ.ಸಂಧ್ಯಾ, ಮಣ್ಣಿನ ಆರೋಗ್ಯ, ಪೋಷಕಾಂಶ, ನೀರಿನ ನಿರ್ವಹಣೆ, ಜೈವಿಕ ಪರಿಕರ ಹಾಗೂ ಅದರ ಉತ್ಪಾದನೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಸಮಗ್ರ ಕೃಷಿ ಪದ್ಧತಿ ಮತ್ತು ಜಾನುವಾರುಗಳ ಸಮಗ್ರ ಮಾದರಿ ಬಗ್ಗೆ ತಾಂತ್ರಿಕ ಅಧಿಕಾರಿ ಜಿ.ಆರ್.ಅರುಣ ಹಾಗೂ ನೈಸರ್ಗಿಕ ಕೃಷಿಯಲ್ಲಿ ಕೀಟ ರೋಗ ನಿರ್ವಹಣೆ ಹಾಗೂ ಜೈವಿಕ ಪೀಡೆನಾಶಕಗಳ ಕುರಿತು ಸಸ್ಯ ಸಂರಕ್ಷಣೆ ವಿಜ್ಞಾನಿ ಸ್ವಾತಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಐದು ದಿನ ನಡೆದ ತರಬೇತಿಯಲ್ಲಿ ಪ್ರಗತಿಪರ ರೈತ ರಾಧಾಕೃಷ್ಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ, ತೋಟಗಾರಿಕಾ ವಿಜ್ಞಾನಿ ಆರ್.ಪ್ರವೀಣಕುಮಾರ್, ಸಹ ಪ್ರಾಧ್ಯಾಪಕ ಸ್ನೇಹಾಲ್, ಕೃಷಿ ವಿಜ್ಞಾನಿ ತನ್ವೀರ್ ಅಹ್ಮದ್, ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲ್ಲೂಕುಗಳ ಕೃಷಿ ಸಖಿಯರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version