Home News Chintamani Police ದಾಳಿ, ಜೂಜಾಟದಲ್ಲಿ ತೊಡಗಿದ್ದ ಮೂವರ ಬಂಧನ

Police ದಾಳಿ, ಜೂಜಾಟದಲ್ಲಿ ತೊಡಗಿದ್ದ ಮೂವರ ಬಂಧನ

0
Chintamani Police Gambling Arrest

Chintamani : ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ನಗರದ ಹೊರವಲಯದ ಕರಿಯಪ್ಪಲ್ಲಿ ಅಗ್ನಿಶಾಮಕ ದಳ ಕಟ್ಟಡದ ಹಿಂಭಾಗದಲ್ಲಿ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕರಿಯಪ್ಪಲ್ಲಿ ಗ್ರಾಮದ ಪ್ರಸಾದ್ ಕುಮಾರ್, ನವೀನ್, ನರಸಿಂಹ ಎನ್ನಲಾಗಿದೆ. ₹3,010 ಹಾಗೂ ಇಸ್ಪೀಟ್ ಎಲೆಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.

ಸಬ್ ಇನ್‌ಸ್ಪೆಕ್ಟರ್ ರವಣಮ್ಮ, ಎಎಸ್‌ಐ ಇಮ್ತಿಯಾಜ್, ಸಿಬ್ಬಂದಿ ಲೋಕೇಶ್, ಚೆನ್ನಕೇಶವ ಜೂಜುಕೋರರ ಮೇಲೆ ದಾಳಿ ನಡೆಸಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version