Chintamani : ಚಿಂತಾಮಣಿ ನಗರದ ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಚಿಂತಾಮಣಿ ತಾಲ್ಲೂಕು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ (Meritorious Students) ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ (Retired Employees) ಸನ್ಮಾನ (Honor) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ (Adichunchanagiri Chickballapur Shaka Mutt) ಮಂಗಳಾನಂದನಾಥ ಸ್ವಾಮೀಜಿ, ‘ಒಕ್ಕಲಿಗ ಸಮುದಾಯ ಸಮಾಜದ ಹಿತ ದೃಷ್ಟಿಯನ್ನು ಕಾಪಾಡುವ ಸಮುದಾಯವಾಗಿದ್ದು ಒಕ್ಕಲಿಗರು ಬರಿ ಒಕ್ಕಲುತನಕ್ಕೆ ಸಿಮೀತವಾಗದೆ, ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಕೊಡಿಸಬೇಕು. ಒಕ್ಕಲಿಗರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಆದಿಚುಂಚನಗಿರಿ ಮಠ ಕೂಡ ಹಲವು ರೀತಿ ಸಹಕಾರ ನೀಡುತ್ತಿದ್ದು ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಮುದಾಯದ ವಿದ್ಯಾರ್ಥಿಗಳು ಬಳಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಉತ್ತಮ ಜೀವನ ನಡೆಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಳ್ಳಿ ರಮೇಶ್ (Ramesh N Yaluvahalli), ಕೋಚಿಮುಲ್ (Kochimul) ನಿರ್ದೇಶಕ ಆಶ್ವತ್ಥ ನಾರಾಯಣಬಾಬು, ಸಮಾಜಸೇವಕ ಬಿ.ಎನ್.ನಾರಾಯಣಸ್ವಾಮಿ, ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷ ರಂಗಸ್ವಾಮಯ್ಯ, ಬೆಸ್ಕಾಂ ಲೆಕ್ಕಾಧಿಕಾರಿ ಆಶೋಕರೆಡ್ಡಿ, ವಿಶ್ವನಾಥ್ ಟ್ರಾನ್ಸ್ ಪೋರ್ಟ್‌ನ ಶ್ರೀರಾಮರೆಡ್ಡಿ, ಆಹಾರ ಸಾಮಾಗ್ರಿಗಳ ಸರಬರಾಜು ಗುತ್ತಿಗೆದಾರ ಎಂ. ರಾಜಾರೆಡ್ಡಿ, ಉಪನ್ಯಾಸಕ ಮುನಿರೆಡ್ಡಿ, ಮಾಜಿ ನಗರಸಭಾ ಸದಸ್ಯ ದೇವರಾಜ್, ಒಕ್ಕಲಿಗ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆರ್. ವೆಂಕಟರವಣಾರೆಡ್ಡಿ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಖಜಾಂಚಿ ಆಂಜನೇಯ, ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಅಧ್ಯಕ್ಷ ಗೌತಮ್ ಸೇರಿದಂತೆ ಒಕ್ಕಲಿಗ ಯುವ ವೇದಿಕೆಯ ಪದಾಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು ಮತಿತ್ತರರು ಉಪಸ್ಥಿತರಿದ್ದರು.