Chintamani: ಶನಿವಾರ ಚಿಂತಾಮಣಿ ನಗರದ ಬೆಂಗಳೂರು ರಸ್ತೆಯ ಹೊರವಲಯದಲ್ಲಿರುವ ಆರ್. ಕೆ ವಿಷನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೌಕಪಡೆ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೌಕಾಪಡೆ, ವಾಯುಪಡೆ, ಮತ್ತು ಸೇನೆ ಸಮವಸ್ತ್ರ ಧರಿಸಿ, ನೌಕಾದಳ ಸೈನ್ಯದಲ್ಲಿ ಹಿಂದೆ ಮಡಿದ ವೀರರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತ ಮತ್ತು ಡಾ G.V.K ರೆಡ್ಡಿ ಸೇನೆಯ ಮಹತ್ವ, ದೇಶಸೇವೆ, ಮುಂತಾದುವುಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಕಿಯರಾದ ಕೆ.ಆರ್. ಗಾಯಿತ್ರಿ, ಮುನಿರತ್ನಮ್ಮ ಹಾಗೂ ಲಕ್ಷ್ಮಿ ಸೇನೆಯ ಮಾಹಿತಿಯನ್ನು ವಿವಿಧ ಭಾಷೆಗಳಲ್ಲಿ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ವರುಣ್, ತನುಶ್ರೀ, ಮುಖ್ಯ ಶಿಕ್ಷಕ ಎಂ.ಸತ್ಯಮೂರ್ತಿ, ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur