Home Sidlaghatta ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಆರೋಗ್ಯ ವಿಮೆ ವಿತರಣೆ

ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಆರೋಗ್ಯ ವಿಮೆ ವಿತರಣೆ

0
Sidlaghatta construction workers

Sidlaghatta : ಶಿಡ್ಲಘಟ್ಟ ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸಂಜೀವಿನಿ ಕಟ್ಟಡ ಕಾರ್ಮಿಕ (Construction Workers) ಸಂಘ ಮತ್ತು ಕಾರ್ಮಿರ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.

ಪ್ರತಿನಿತ್ಯ ತನ್ನ ಬದುಕಿನ ಭಾಗವಾಗಿ ಕೆಲಸದಲ್ಲಿ ತೊಡಗುವ ಕಾರ್ಮಿಕ ವರ್ಗ ಆರೋಗ್ಯದತ್ತ ಚಿತ್ತ ಹರಿಸದ ಪರಿಣಾಮ, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದನ್ನು ಅರಿತ ಸರ್ಕಾರ ಈ ಸಮಸ್ಯೆಗೆ ಪರಿಹಾರವಾಗಿ “ಶ್ರಮಿಕ ಸಂಜೀವಿನಿ” ಯೋಜನೆಯನ್ನು ರೂಪಿಸಿ ಜಾರಿಗೆ ಮುಂದಾಗಿದೆ. ಸರ್ಕರದ ಯೋಜನೆಗಳನ್ನು ಕಾರ್ಮಿಕ ವರ್ಗದವರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸಂಜೀವಿನಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷೆ ಡಿ.ಅನಿತಾ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರ ಸ್ವಾಸ್ಥ್ಯಕ್ಕೆ ಒತ್ತು ನೀಡುವ ಶ್ರಮಿಕ ಸಂಜೀವಿನಿ ನಿಜಕ್ಕೂ ಬಹು ಉಪಯುಕ್ತ ಯೋಜನೆ. ಶ್ರಮಿಕರು ಇರುವರೆಡೆಗೆ ತೆರಳಿ ಅವರ ಆರೋಗ್ಯ ಪರೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಸಿದ್ಧಗೊಂಡಿರುವ ಈ ಸಂಚಾರಿ ಕ್ಲಿನಿಕ್‌ಗಳು, ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಅಣಿಗೊಂಡಿರುವುದು ವಿಶೇಷ ಎಂದರು.

ಬ್ಲಾಸಮ್ ಹಾಸ್ಪಿಟಲ್‌ನ ಸಿ ಇ ಓ ಡಾ.ಚಂದನ್ ದಾಸ್ ಮಾತನಾಡಿ, ಆರೋಗ್ಯ ಸೇವೆಗಳ ಬಗ್ಗೆ ವಿವರಿಸಿದರು.

ಕಟ್ಟಡ ಕಾರ್ಮಿಕರಿಗೆ ಅವರು ಬಳಸುವ ಸಲಕರಣೆಗಳು ಹಾಗೂ ಆರೋಗ್ಯ ವಿಮೆ ಇನ್ನೂ ಹಲವಾರು ಯೋಜನೆಗಳ ಪಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ಯೋಜನೆಯ ಸವಲತ್ತುಗಳನ್ನು ನೀಡಲಾಯಿತು.

ಮಾಜಿ ಶಾಸಕ ಎಂ.ರಾಜಣ್ಣ, ಕಾರ್ಮಿಕರ ಇಲಾಖೆಯ ವರಲಕ್ಷ್ಮಿ, ನಗರಸಭೆ ಆಯುಕ್ತ ಶ್ರೀಕಾಂತ್, ಕಾರ್ಮಿಕ ಇಲಾಖೆ ಮಂಜುಳ, ಪಶುವೈದ್ಯಾಧಿಕಾರಿ ಡಾ.ರಮೇಶ್, ಮೋಹನ ಕುಮಾರಿ, ಶೀಲ, ಸೊಣ್ಣಮ್ಮ, ಲಕ್ಷ್ಮಿ, ಕನಕಪ್ರಸಾದ್,ನಾರಾಯಣಸ್ವಾಮಿ, ಡಿ.ಸಿ.ರಮೇಶ್‌, ಎಂ.ಮಂಜುನಾಥ್, ಟಿಪ್ಪು ಮೌಲಾ, ಶ್ರೀರಾಮ, ಪ್ರದೀಪ್, ರೈತ ಸಂಘದ ರವಿಪ್ರಕಾಶ್, ಅರುಣ್ ಕುಮಾರ್, ಎಚ್.ಗೋಪಾಲ್ ಹಾಜರಿದ್ದರು.

 

For Daily Updates WhatsApp ‘HI’ to 7406303366

error: Content is protected !!
Exit mobile version