Chikkaballapur : ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯ ಫೀಡರ್‌ಗಳಲ್ಲಿ ನಿರ್ವಹಣೆ ಕಾಮಗಾರಿಯ ಕಾರಣ ಡಿ.6ರಿಂದ ಈ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ
ತಾಲ್ಲೂಕಿನ ಗವಿಗಾನಹಳ್ಳಿ, ಚದಲಪುರ, ಚಿನ್ನಂಡಹಳ್ಳಿ, ಕೊಳವನಹಳ್ಳಿ, ಬೊಮ್ಮನಹಳ್ಳಿ, ನಂದಿಕ್ರಾಸ್, ಸಿವಿ ಕ್ಯಾಂಪಸ್, ತುಮುಕಲಹಳ್ಳಿ, ಅರಸನಹಳ್ಳಿ, ಕೊತ್ತೂರು, ನಾಗಾರ್ಜುನ ಕಾಲೇಜು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಗೌರಿಬಿದನೂರು
ಗೌರಿಬಿದನೂರು ನಗರ, ಹಿರೆಬಿದನೂರು, ಗೊಟಕನಾಪುರ, ಮಾಧವನಗರಮರಿಮಾಕಲಹಳ್ಳಿ, ಮಿನಕನಗುರ್ಕಿ, ಜರಬಂಡಹಳ್ಳಿ, ಹನುಮಂತಪುರ, ಕಲ್ಲಿನಾಯಕನಹಳ್ಳಿ, ತಿಪ್ಪಗಾನಹಳ್ಳಿ, ಬಂದರ‍್ಲಹಳ್ಳಿ, ಬಸವಾಪುರ, ಕ್ರಿಶ್ಚಿಯನ್ ಕಾಲೊನಿ, ಕಾದಲವೇಣಿ, ಮುದುಗೆರೆ, ಕೆಂಕರೆ, ಚೆನ್ನೇನಹಳ್ಳಿ, ಕುರುಗೋಡು ತಮ್ಮನಹಳ್ಳಿ, ದಿಮ್ಮಗಟ್ಟನಹಳ್ಳಿ, ಕಾಚಮಾಚೇನಹಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 12ರಿಂದ 2ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗುಡಿಬಂಡೆ
ತಾಲ್ಲೂಕಿನ ಪೋಲಂಪಲ್ಲಿ, ನಡುವನಹಳ್ಳಿ, ಜಂಗಾಲಹಳ್ಳಿ, ಬೊಮ್ಮಗಾನಹಳ್ಳಿ, ಅಪ್ಪರೆಡ್ಡಿಹಳ್ಳಿ, ಮೇಡಮಾಕಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಶಿಡ್ಲಘಟ್ಟ
ಡಿಸೆಂಬರ್ 6 ಮತ್ತು 7 ರಂದು ತಾಲ್ಲೂಕಿನ ದಿಬ್ಬೂರಹಳ್ಳಿ 66/11 ಕೆವಿ ಉಪವಿದ್ಯುತ್ ಕೇಂದ್ರದಿಂದ ಹಾದು ಹೋಗಿರುವ ಮಾರ್ಗಕ್ಕೆ ಕೋಲಾರದ ಕೆಪಿಟಿಸಿಎಲ್ ವಿಭಾಗದಿಂದ ಕಾರಿಡಾರ್ ಟವರ್ ಅಳವಡಿಸುವ ಕಾಮಗಾರಿಯನ್ನು ಕೈಗೊಂಡಿರುವುದರಿಂದ ದಿಬ್ಬೂರಹಳ್ಳಿಯ 66/11 ಕೆವಿ ಉಪ ವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ವ್ಯತ್ಯಯವಾಗಲಿದೆ. ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಈ.ತಿಮ್ಮಸಂದ್ರ, ಕೋರ್ಲಪರ್ತಿ, ಆನೆಮಡುಗು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ದಿಬ್ಬೂರಹಳ್ಳಿ, ದ್ಯಾವಪ್ಪನಗುಡಿ, ಸಾದಲಿ, ದ್ಯಾವರಹಳ್ಳಿ, ರಾಯಪ್ಪನಹಳ್ಳಿ, ಬೈರಗಾನಹಳ್ಳಿ, ತಲಕಾಯಲಬೆಟ್ಟ, ಬೈಯಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಡಿಸೆಂಬರ್ 6 ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಇಇ ಬಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.