Home Sidlaghatta ಗ್ರಾಮ ಡಿಜಿ ವಿಕಸನ ತರಬೇತಿ ಕಾರ್ಯಕ್ರಮ

ಗ್ರಾಮ ಡಿಜಿ ವಿಕಸನ ತರಬೇತಿ ಕಾರ್ಯಕ್ರಮ

0

Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ತಾಲ್ಲೂಕಿನಲ್ಲಿ “ಗ್ರಾಮ ಡಿಜಿ ವಿಕಸನ” (Digi Village Development) ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಗ್ರಂಥಾಲಯಗಳಿಗೆ Mobile ಗಳು ಹಾಗೂ Laptop ಗಳನ್ನು ವಿತರಿಸಿ ತಾಲ್ಲೂಕು ಪಂಚಾಯಿತಿ EO ಮುನಿರಾಜು ಅವರು ಮಾತನಾಡಿದರು.

ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ತಾಲ್ಲೂಕಿನಲ್ಲಿ ಈಗಾಗಲೇ 9 ಗ್ರಂಥಾಲಯಗಳ ಡಿಜಿಟಲೀಕರಣ (Digital Library) ಮಾಡಲಾಗಿದೆ. ವಿದ್ಯಾರ್ಥಿಗಳು ಈ ಮೂಲಕ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ಫೌಂಡೇಶನ್ ಸಂಸ್ಥೆಯ ವತಿಯಿಂದ ನೀಡಿರುವ ಎಲ್ಲ ಡಿಜಿಟಲ್ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಪಂಚಾಯಿತಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಸಲಹೆ ನೀಡಿದರು.

ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಕುಮಾರನಾಯಕ ಮಾತಾನಾಡಿ, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವು ಗ್ರಾಮೀಣ ಪ್ರದೇಶದಲ್ಲಿರುವ 12 ರಿಂದ 24 ವಯೋಮಾನದ ವಿದ್ಯಾರ್ಥಿಗಳು, ಯುವಕ ಯುವತಿಯರಿಗೆ ಇಂದಿನ 21ನೇ ಶತಮಾನದಲ್ಲಿ ಡಿಜಿಟಲ್ ಕೌಶಲಗಳ ಅವಶ್ಯಕತೆ ಇದ್ದು ಅದನ್ನು ಗ್ರಾಮೀಣ ಭಾಗದ ಯುವಕ ಯುವತಿಯರು ಪಡೆದುಕೊಳ್ಳಬೇಕಾಗಿದೆ ಎಂದರು.

ಈ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಆರು ತಾಲೂಕಿನಲ್ಲಿ ಒಟ್ಟು 37 ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಟ್ಟು 9 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಪಿ.ಡಿ.ಒ ಮತ್ತು ಮೇಲ್ವಿಚಾರಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ಆಯ್ಕೆಯಾದ ಮೇಲೂರು, ಭಕ್ತರಹಳ್ಳಿ, ಮಳ ಮಾಚನಹಳ್ಳಿ, ನಾಗಮಂಗಲ, ಕುಂಬಿಗನಹಳ್ಳಿ, ಜಂಗಮಕೋಟೆ, ವೈ ಹುಣಸೇನಹಳ್ಳಿ, ಆನೂರು, ದೇವರಮಳ್ಳೂರು ಪಂಚಾಯಿತಿಗಳಿಗೆ 2 ಮೊಬೈಲ್ , 1 ಕ್ರೋಮ್ ಬುಕ್ ಲ್ಯಾಪ್ ಟಾಪ್, 1 ಮಾನಿಟರ್, ಕಿ ಬೋರ್ಡ್, ಬ್ಯಾಗ್ ನೀಡಲಾಗಿದೆ.

ನೀಡಿರುವ ಮೊಬೈಲ್‍ಗಳಲ್ಲಿ ಶಿಕ್ಷಣ ಪೀಡಿಯಾ ಎಂಬ ಅಪ್ಲಿಕೇಶನ್ ಅಳವಡಿಸಿದ್ದು ಅದರಲ್ಲಿ 8, 9, 10ನೇ ತರಗತಿಯ ಪಾಠಗಳು ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು, ಡಿಜಿಟಲ್ ಕೌಶಲಗಳ ವಿಡಿಯೋಗಳನ್ನು ನೋಡಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬಹುದು. ಟಿ.ವಿಗೆ ಇಂಟರ್ ನೆಟ್ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳು ತಮಗೆ ಬೇಕಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಪಾಠಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ರೈತರು ಸಹ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ ಎಂದರು.

ಪ್ರತಿ ಭಾನುವಾರ ಎರಡು ಗಂಟೆಗಳ ಕಾಲ ಯುವಕ ಯುವಕರಿಗೆ ತರಬೇತಿ ತಂತ್ರಜ್ಞಾನದ ತರಗತಿಗಳನ್ನು ಮಾಡಲಾಗುತ್ತದೆ ಹಾಗೂ ಅವರಿಗೆ ಕಮ್ಯುನಿಕೇಷನ್ ಟೆಕ್ನಾಲಜಿ ಇನ್ಫಾರ್ಮಶನ್ ಬ್ಯಾಂಕಿಂಗ್ ಜಿಮೇಲ್ ಬಗ್ಗೆ ಹಲವು ವಿಷಯಗಳನ್ನು ಕುರಿತು ತರಬೇತಿಯನ್ನು ಕೊಡಲಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪಿಡಿಒಗಳು ಮತ್ತು ಮೇಲ್ವಿಚಾರಕರು ಹಾಜರಿದ್ದರು

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version