Sidlaghatta : ನಾವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಇದರಿಂದ ನಾವಷ್ಟೆ ಅಲ್ಲ ನಮ್ಮ ಮೇಲೆ ಅವಲಂಬಿತರು ಸುಖ ಶಾಂತಿ ನೆಮ್ಮದಿಯ ಬದುಕನ್ನು ನಡೆಸಬಹುದು ಎಂದು ತಾಲ್ಲೂಕು ಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮೆಲ್ಲರ ಬದುಕಿನಲ್ಲೂ ಕಣ್ಣು ಕಿವಿ ಮೂಗು ನಾಲಿಗೆಯಂತ ಎಲ್ಲ ಅಂಗಾಗಗಳೂ ಸಹ ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲೂ ಕಣ್ಣು ಅತಿ ಹೆಚ್ಚು ಮುಖ್ಯ ಅಂಗ.. ಹಾಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದರು.
ಜತೆಗೆ ಸಾಕಷ್ಟು ಜನರು ನಾನಾ ಕಾರಣಗಳಿಗಾಗಿ ಅಂಧತ್ವ ಸಮಸ್ಯೆಯನ್ನು ಎದುರಿಸುತ್ತಿದ್ದು, ನಮ್ಮ ಸಾವಿನ ನಂತರ ನಮ್ಮ ಕಣ್ಣುಗಳನ್ನು ಅಂಧತ್ವವನ್ನು ಎದುರಿಸುತ್ತಿರುವವರಿಗೆ ದಾನ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅನೇಕ ರೀತಿಯ ಮೂಡ ನಂಬಿಕೆಗಳನ್ನು ಸಹ ಹೊಂದಿರುವುದು ಕಣ್ಣಿನ ದಾನಕ್ಕೆ ಅಡ್ಡಿಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರತಿ ವರ್ಷವೂ 5600 ರಷ್ಟು ಮಂದಿ ತಮ್ಮ ಕಣ್ಣಿನ ದಾನ ಮಾಡುತ್ತಿದ್ದಾರೆ. ಆದರೆ 1.26 ಲಕ್ಷ ಮಂದಿ ಕಾರ್ನಿಯಾದಂತ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಣ್ಣಿನ ದಾನಕ್ಕೂ ಕಣ್ಣಿನ ಅಗತ್ಯ ಇರುವವರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು.
ಕಣ್ಣಿನ ದಾನ ಮತ್ತು ಕಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8 ರವರೆಗೂ ಪಾಕ್ಷಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಘೋಷಣೆಗಳು, ಭಿತ್ತಿ ಚಿತ್ರಿಗಳ ಪ್ರದರ್ಶನದ ಮೂಲಕ ಕಣ್ಣಿನ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಕಾರಿ ಡಾ.ಮನೋಹರ್, ಡಾ.ವಾಣಿ, ಡಾ.ಭಾವನಾ, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಮುನಿರತ್ನಮ್ಮ, ಗೀತಾ, ಚೈತ್ರ, ವಿಜಯಮ್ಮ, ಸುನಿಲ್, ಮೀನಾಕ್ಷಿ, ಅಪ್ರೋಜ್, ಕೀರ್ತಿ ಹಾಜರಿದ್ದರು.