- Advertisement -
- Advertisement -
- Advertisement -
- Advertisement -
Bagepalli : ಕರ್ನಾಟಕದಲ್ಲಿ ಇಂಧನ ದರವೂ ನೆರೆಯ ಆಂದ್ರಪ್ರದೇಶಕ್ಕಿಂತ ಕಡಿಮೆ ಇರುವ ಕಾರಣ ಗಡಿ ಪ್ರದೇಶದ ಪೆಟ್ರೋಲ್ ಬಂಕ್ ಗಳಿಗೆ ಆಂಧ್ರಪ್ರದೇಶದ ವಾಹನ ಸವಾರರು ದಿನನಿತ್ಯ ರಾಜ್ಯ ಗಡಿ ದಾಟಿ ಬಂದು ತಮ್ಮ ವಾಹನಗಳಿಗೆ ಪೆಟ್ರೋಲ್ / ಡಿಸೇಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ.
ಪ್ರಸ್ತುತ ಗೌರಿಬಿದನೂರು ತಾಲ್ಲೂಕಿನಲ್ಲಿ ಬುಧವಾರ ಇಂಧನ ದರವು ಪೆಟ್ರೋಲ್ ₹ 101.40 ಹಾಗೂ ಡೀಸೆಲ್ ₹85.43 ಇದ್ದರೆ ನೆರೆಯ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ₹ 111.38 ಹಾಗೂ ಡೀಸೆಲ್ ₹ 97.41 ವರದಿಯಾಗಿದೆ.
ಆಂಧ್ರಪ್ರದೇಶದ ಚೆಕ್‌ಪೋಸ್ಟ್, ಕೊಡೂರು, ಚಿಲಮತ್ತೂರು, ಲೇಪಾಕ್ಷಿ, ಗೋರಂಟ್ಲ ಸೇರಿದಂತೆ ವಿವಿಧ ಹಳ್ಳಿಯ ಜನರು ದ್ವಿಚಕ್ರ, ಆಟೊ, ಕಾರು, ಟೆಂಪೋ, ಲಾರಿಗಳಲ್ಲಿ ಹಾಗೂ ಕ್ಯಾನುಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಿಕೊಂಡು ಹೋಗುತಿರುವ ದೃಶ್ಯ ಸಾಮಾನ್ಯವಾಗಿದೆ.
For Daily Updates WhatsApp ‘HI’ to 7406303366
- Advertisement -