Bagepalli : ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ದೇವರಗುಡಿಪಲ್ಲಿ (ಗಡಿದಂ) ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ (Gadidam Sri Lakshmi Venkataramana Swamy Temple) ಸ್ವಚ್ಛತೆಗೆ (Temple Cleaning) ಮಾಚಿ ಸಚಿವ ಡಾ.ಸುಧಾಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಸುಧಾಕರ್ ” ಜ.22 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನೆ ಅಂಗವಾಗಿ ದೇವಾಲಯಗಳ ಸ್ವಚ್ಛತೆಗೆ ಪ್ರಧಾನಮಂತ್ರಿ ಕರೆ ನೀಡಿರುವುದರಿಂದ ತಾಲ್ಲೂಕಿನ ಐತಿಹಾಸಿಕ ಗಡಿದಂ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಬಾಗೇಪಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಗುಡಿಬಂಡೆ ಅಧ್ಯಕ್ಷ ಗೆಂಗಿರೆಡ್ಡಿ, ಮಾಜಿ ಅಧ್ಯಕ್ಷ ಎಸ್.ಟಿ.ಚಂದ್ರಮೋಹನ್, ಮುಖಂಡರಾದ ಸುಧಾಕರರೆಡ್ಡಿ, ಮುಮ್ಮಡಿವಾರಿಪಲ್ಲಿ ವೆಂಕಟರೆಡ್ಡಿ, ವೆಂಕಟೇಶ್, ಎಸ್.ವೈ.ವೆಂಕಟರವಣರೆಡ್ಡಿ, ಶ್ರೀನಿವಾಸರೆಡ್ಡಿ, ಚಂದ್ರಶೇಖರರೆಡ್ಡಿ, ಸೋಮಶೇಖರರೆಡ್ಡಿ, ನಂಜೇಶ್ ರೆಡ್ಡಿ, ಮಂಜುನಾಥ್, ರವಿ, ರಾಮಪ್ಪ, ವೆಂಕಟೇಶ್, ಕೆ.ಆರ್.ಆಂಜಿನಪ್ಪ, ನಿರ್ಮಲಮ್ಮ ಪಾಲ್ಗೊಂಡಿದ್ದರು.